ಸ್ಟೇಟಸ್ ಕತೆಗಳು (ಭಾಗ ೧೧೧೬)- ಆತ್ಮ ಸಾಕ್ಷಿ

ಸ್ಟೇಟಸ್ ಕತೆಗಳು (ಭಾಗ ೧೧೧೬)- ಆತ್ಮ ಸಾಕ್ಷಿ

ಮನೆಯೊಳಗೆ ಪ್ರವೇಶವಾಗಲು ಸಾಧ್ಯವಾಗ್ತಾ ಇಲ್ಲ. ಬಾಗಿಲಲ್ಲೇ ತಡೆ ಹಿಡಿದು ನಿಲ್ಲಿಸಿ ಬಿಟ್ಟಿದ್ದಾರೆ. ಎದುರಿಗೆ ನಿಂತವರು ಯಾರೋ ವ್ಯಕ್ತಿಗಳಲ್ಲ. ಆತ್ಮಸಾಕ್ಷಿಯೇ ಮುಂದೆ ನಿಂತು ಪ್ರಶ್ನೆಗಳ ಪಟ್ಟಿಯನ್ನು ತಯಾರು ಮಾಡ್ತಾ ಇದೆ. ಎಲ್ಲರಿಗೂ ಹೇಳುವ ನೀನು ಹೇಗಿದ್ದೀಯಾ? ಗಡಿಯಾರದ ಮುಳ್ಳು ಒಂದು ಕ್ಷಣವೂ ಬಿಡದೆ ನಿರಂತರವಾಗಿ ತಿರುಗುತ್ತಿದ್ದರೂ ಸಹ ನೀನು ಹಾಗೆ ಒಂದು ಕಡೆ ನಿಂತಿದ್ದೀಯಾ ತಾನೇ? ಮಾಡುವುದಕ್ಕೆ ಹಲವು ಅವಕಾಶಗಳಿದ್ದರೂ ಉದಾಹರಣೆಗಳ ಪಟ್ಟಿ ದೊಡ್ಡದಿದ್ದರೂ ಕೂಡ ಎಲ್ಲವನ್ನು ಬದುಕಿಸಿ ಕ್ಷಣ ಬದುಕೋದಕ್ಕೆ ದಾರಿ ಹುಡುಕಿದ್ದೀಯಾ ತಾನೇ? ಯೋಚನೆಗಳಿಗೆ ಚಿಂತನೆಗಳಿಗೆ ಆಹಾರ ನೀಡಿ ಅದ್ಭುತವಾದದ್ದನ್ನ ಸಾಧಿಸುವ ಅವಕಾಶವಿದ್ದರೂ ಮೊಬೈಲ್ ನೋಡುತ್ತಾ ಮುಳುಗಿ ಎಲ್ಲವನ್ನೂ ಮರೆತುಬಿಟ್ಟಿದ್ದೀಯಾ ತಾನೇ? ಕೈಯಲ್ಲೊಂದು ಪುಸ್ತಕ ಕಣ್ಣ ಮುಂದೆ ಇದ್ದರೂ ದೇಹವನ್ನು ಗೋಡೆಗೆ ಒರಗಿಸಿಕೊಂಡು ನೆಮ್ಮದಿಯ ಉಸಿರಾಡಿದ್ದಿ ತಾನೇ? ಇಷ್ಟೆಲ್ಲಾ ನೀನು ಮಾಡಿರುವಾಗ ನೀನು ಬೇರೆಯವರಿಗೆ ಒಳಿತನ್ನು ಬದಲಾವಣೆಯನ್ನು ಸೂಚಿಸಲು ಹೋಗೋದು ಸರಿಯಾ? ಹಾಗಾಗಿ ನನಗೆ ನಿನ್ನೊಳಗೆ ಕೂತು ತುಂಬಾ ನೋವಾಗ್ತಾ ಇದೆ. ನಾನು ಹೊರಟು ಹೋಗಬೇಕೆಂದು ತೀರ್ಮಾನಿಸಿದ್ದೇನೆ. ಒಮ್ಮೆ ಯೋಚಿಸು, ನುಡಿದಂತೆ ನಡೆಯುವವನಾಗು ಅಥವಾ ನಿನ್ನ ಅದ್ಭುತ ದಾರಿಯನ್ನ ಒಂದಷ್ಟು ಜನ ಅನುಸರಿಸುವಂತೆ ಮಾಡು. ದಿನಗಳಿಲ್ಲ, ಗಂಟೆಗಳಿಲ್ಲ ಕ್ಷಣ ಒಂದು ನಿನ್ನ ಮುಂದಿದೆ ನಿರ್ಧರಿಸು...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ