ಸ್ಟೇಟಸ್ ಕತೆಗಳು (ಭಾಗ ೧೧೨೩)- ಜನವೋ ಮನವೋ
ಮೆಚ್ಚಬೇಕು ಆದರೆ ಯಾರು ಯಾವುದನ್ನು ಮೆಚ್ಚಬೇಕು ಅಂತ ನಿರ್ಧರಿಸಬೇಕು ನೀನು, ನಿನಗೆ ಅರ್ಥವಾಗುತ್ತಿಲ್ಲ ಸದ್ಯದ ನಿನ್ನ ಮನಸ್ಸು ನೀನು ಮಾಡುವ ಕಾರ್ಯವನ್ನ ಜನ ಮೆಚ್ಚಬೇಕು ಅಂತ ಬಯಸ್ತಾ ಇದ್ದೀಯ. ಜನ ಮೆಚ್ಚಿದರೆ ಸಾಕು ಎಲ್ಲವೂ ಸುಂದರವಾಗಿರುತ್ತೆ ಅದ್ಭುತವಾಗಿರುತ್ತೆ ಅಂತ ಅಂದುಕೊಳ್ಳುವ ವಯಸ್ಸಲ್ಲಿ ಬದುಕ್ತಾ ಇದ್ದೀಯಾ, ಆದರೆ ಜನಾ ಮೆಚ್ಚಿ ನಿನ್ನ ಮನ ಮೆಚ್ಚದಿದ್ರೆ ಆ ಕೆಲಸ ಯಾವತ್ತೂ ಕೊನೆ ತಲುಪುವುದಿಲ್ಲ. ಯಾವತ್ತೂ ನಮ್ಮ ಮನಸ್ಸು ಮೆಚ್ಚುವ ಕೆಲಸ ಕೈಗೊಂಡರೆ, ಆ ಕೆಲಸವನ್ನು ಖಂಡಿತವಾಗಿಯೂ ಜನ ಮೆಚ್ಚುತ್ತಾರೆ. ಒಂದು ವೇಳೆ ನಿನ್ನ ಮನಮೆಚ್ಚಿದ ಕಾರ್ಯವನ್ನ ಆ ಕ್ಷಣದಲ್ಲಿ ಜನ ಮೆಚ್ಚದೆ ಹೋದರು ಮುಂದೊಂದು ದಿನ ಮೆಚ್ಚಿಯೇ ಮೆಚ್ಚುತ್ತಾರೆ. ಹಾಗಾಗಿ ಮನಮೆಚ್ಚಿದ ಕಾರ್ಯ ನಿರಂತರವಾಗಿರಲಿ ಎಲ್ಲ ಕಾರ್ಯವನ್ನು ಮನಮೆಚ್ಚುವ ಹಾಗೆ ಕೈಗೊಳ್ಳುತ್ತ ಹೋಗು ಮನಸ್ಸಿಗೊಪ್ಪಿತವಾಗುವ ಕೆಲಸ ಒಳಗೆ ಕುಳಿತ ನಿರಾಕಾರ ಭಗವಂತನಿಗೂ ಒಪ್ಪಿಗೆಯಾಗುತ್ತದೆ. ಮನಮೆಚ್ಚುವ ಕೆಲಸದಿಂದ ಹಿನ್ನಡೆಯಾಗಬಹುದು ಮುಂದೆ ಸಾಗುತ್ತಿಲ್ಲ ಅನ್ನಿಸಬಹುದು ಯಾರು ಗಮನಿಸುತ್ತಿಲ್ಲ ಎನ್ನುವ ಭಾವ ಮೂಡಬಹುದು, ಆದರೆ ನಿನ್ನ ಜೀವನದ ಕೊನೆಯ ದಿನಗಳಲ್ಲಿ ನಿನ್ನ ಮನಸ್ಸಿಗೊಂದು ನೆಮ್ಮದಿಯ ಭಾವ ಬೇಕಾದರೆ ನೀನು ಮನಮೆಚ್ಚುವ ಕಾರ್ಯವನ್ನೇ ಕೈಗೊಳ್ಳಬೇಕು . ಸದ್ಯದ ಬದುಕಿಗೆ ಇದು ಸಮಸ್ಯೆ ಆಗಬಹುದು ಆದರೆ ಒಳಿತು ಖಂಡಿತವಾಗಿ ಆಗುತ್ತದೆ. ತನ್ನ ಮುಂದೆ ಕಣ್ಣೀರು ಇಳಿಸುತ್ತಾ ಕುಳಿತ ಮಗನಿಗೆ ತಂದೆ ಹೇಳ್ತಾ ಇದ್ರು ಅವರು ಜೀವನ ಪೂರ್ತಿ ಮನಸ್ಸಿಗೆ ಒಪ್ಪಿತವಾಗುವ ಕೆಲಸವನ್ನು ಯಾವುದನ್ನು ಮಾಡಿಲ್ಲ ಅನ್ನುವ ಕೊರಗಿನಲ್ಲಿ ಕುಗ್ಗಿ ಹೋಗಿದ್ರು ತಾನು ಮಾಡಿದ ತಪ್ಪು, ಮಗನಿಂದ ಆಗಬಾರದು ಅನ್ನುವ ಕಾರಣಕ್ಕೆ ಮನಮೆಚ್ಚುವ ಕೆಲಸವನ್ನು ಮಾಡುತ್ತಿದ್ದರು. ವಿಷಯ ದಾಟಿದೆ ತಂದೆಯಿಂದ ಮಗನಿಗೆ ವಿಚಾರಗಳು ದಾಟಿದೆ. ಕಾರ್ಯರೂಪಕ್ಕೆ ಬರುತ್ತದೆ ಇಲ್ಲವೋ ಕಾಯಬೇಕು.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ