ಸ್ಟೇಟಸ್ ಕತೆಗಳು (ಭಾಗ ೧೧೨೭)- ಪೊರಕೆ

ಸ್ಟೇಟಸ್ ಕತೆಗಳು (ಭಾಗ ೧೧೨೭)- ಪೊರಕೆ

ಪೊರಕೆ ಹುಡುಕುತ್ತಿದ್ದೇನೆ, ಎಲ್ಲಿಯೂ ಸಿಗುತ್ತಿಲ್ಲ. ಎಲ್ಲಾ ಅಂಗಡಿಯ ಮುಂದೆ ನಿಂತು ಅಲ್ಲಿದ್ದ ಮುಖ್ಯಸ್ಥರಲ್ಲಿ ವಿಚಾರಿಸಿದ್ದೇನೆ. ಅವರಿಗೂ ಅದರ ಬಗ್ಗೆ ತಿಳಿದಿಲ್ಲ. ಪೊರಕೆ ಸಿಗುವ ದೊಡ್ಡ ಅಂಗಡಿಯ ಒಳಗೆ ಹೋಗಿ ನನಗೆ ಬೇಕಾದ ಪೊರಕೆಯನ್ನು ಎಷ್ಟು ಹುಡುಕಿದರೂ ಅಲ್ಲಿ ಒಂದೂ ನನ್ನ ಕಣ್ಣಿಗೆ ಬೀಳುತ್ತಿಲ್ಲ. ನಮ್ಮ ಮನೆಯ ಗುಡಿಸುವ ಪೊರಕೆ ಎಲ್ಲಿಯಾದರೂ ಸಿಕ್ಕಿತೂ. ಬಿದ್ದಿರುವ  ಕಸ ಕಡ್ಡಿ ಕಾಗದ ತುಂಡು ಎಲ್ಲವನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಕೊಂಡೊಯ್ದು ಒಂದು ಕಡೆ ಶೇಖರಿಸಿ ಅಲ್ಲಿಂದ ಸ್ವಚ್ಛವಾಗಿಸುತ್ತದೆ. ಆದರೆ ನನಗೆ ಬೇಕಾಗಿರುವುದು ಅಂತಹ ಪೂರಕೆಯಲ್ಲ, ನನ್ನ ಮನೆಯಲ್ಲಿ ಮನೆಗೆ ಬೇಕಾದ ಪೊರಕೆ ಇದೆ, ಮನಸ್ಸಿನ ಒಳಗೆ ಅಗತ್ಯವೂ ಅನಗತ್ಯವೂ ವಿಚಾರಗಳು ತುಂಬಿಕೊಂಡು ಎಲ್ಲವೂ ಗೋಜಲುಮಯವಾಗಿದೆ. ಅದನ್ನ ಗುಡಿಸುವ ಪೊರಕೆಬೇಕು. ಆದರೆ ಆ ಪೊರಕೆ ಒಳಿತಿರುವ ಯಾವುದನ್ನು ಮುಟ್ಟಿಯೂ ನೋಡಬಾರದು, ಆ ಕೆಲಸವನ್ನು ಬರಿ ಪೊರಕೆಯೇ ಮಾಡಬೇಕು. ಹಾಗಾಗಿ ಅಂತಹ ಪೊರಕೆಯ ದಾರಿ ನೋಡುತ್ತಿದ್ದೇನೆ. ನಿಮಗೆಲ್ಲಾದರೂ ಪೊರಕೆ ಸಿಕ್ಕರೆ ದಯವಿಟ್ಟು ಕಳುಹಿಸಿಕೊಡಿ. ಮನದ ಕಲ್ಮಶವನ್ನು ಸ್ವಚ್ಛಗೊಳಿಸಿ ನೆಮ್ಮದಿಯ ಉಸಿರಾಡಬೇಕಾಗಿದೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ