ಸ್ಟೇಟಸ್ ಕತೆಗಳು (ಭಾಗ ೧೧೨೮)- ಪಾಠ

ಸ್ಟೇಟಸ್ ಕತೆಗಳು (ಭಾಗ ೧೧೨೮)- ಪಾಠ

ಮೋಡ ಮತ್ತು ಗಾಳಿಗೆ ಮಾತುಕತೆ ಶುರುವಾಗಿತ್ತು. ಸರಸದ ಮಾತುಕತೆ ವಿರಸದ ಕಡೆಗೆ ತಿರುಗಿತ್ತು. ಈ ಇಬ್ಬರಿಗೂ ಒಂದಷ್ಟು ಅಹಂ ತುಂಬಿಕೊಂಡಿತ್ತು. ಜನ ನೆಮ್ಮದಿಯಲ್ಲಿದ್ದಾರೆ  ಊರು ಬದುಕಿದೆ ಭೂಮಿ‌ ಉಸಿರಾಡುತ್ತಿದೆ ಇದಕ್ಕೆಲ್ಲಾ ನಾನೇ ಕಾರಣ ಅನ್ನೋದು ಗಾಳಿಯ ವಾದ. ನೀನು ಬರಿಯ ತಿರುಗಾಡಿಸುವುದು ಮಾತ್ರ. ಆದರೆ ನೀರು ತುಂಬಿಕೊಂಡು ಪ್ರತಿ ಊರಿಗೂ ತಲುಪಿಸುವ ಜವಾಬ್ದಾರಿ ನನ್ನದು. ಹಾಗಾಗಿ ನನ್ನಿಂದಲೇ ಊರು ಚೆನ್ನಾಗಿರೋದು, ವಾದ ಬೆಳೆಯಿತು.  ಇಬ್ಬರೂ ಒಂದೊಂದು ದಾರಿಯನ್ನು ಹುಡುಕಿಕೊಂಡರು. ಇವರಿಬ್ಬರ  ಜಗಳ ನೋಡುತ್ತಿದ್ದ ಭೂಮಿ ಒಂದಷ್ಟು ತಾಪವನ್ನು ಹೆಚ್ಚಿಸಿಕೊಂಡು ತನ್ನ ಕಡೆಗೆ ಮಳೆಯನ್ನ ಸೆಳೆಯೋದಕ್ಕೆ ಪ್ರಾರಂಭ ಮಾಡಿತು. ಆಗ ಗಾಳಿ ಆ ಕಡೆಗೆ ಬೀಸಲೇಬೇಕಾಯಿತು. ಮೋಡ‌ಗಾಳಿಯ ಸಂಘರ್ಶದಿಂದ  ಭೂಮಿಗೆ ಮಳೆಯ ಸಿಂಚನವಾಯಿತು .ಇಬ್ಬರಿಗೂ ತಮ್ಮ ವಸ್ತು ಸ್ಥಿತಿ ಅರಿವಾಯಿತು. ಯಾರು ಮುಖ್ಯರೂ ಅಲ್ಲ ಯಾರು ಅಮುಖ್ಯರಲ್ಲ. ಅವರವರ ಕೆಲಸವನ್ನು ಅವರವರು ನಿರ್ವಹಿಸಬೇಕಷ್ಟೆ ಎನ್ನುವುದು ತಿಳಿಯಿತು.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ