ಸ್ಟೇಟಸ್ ಕತೆಗಳು (ಭಾಗ ೧೧೩೧)- ಬೆಳಕು
ರಸ್ತೆ ಬದಿಯಲ್ಲಿ ನಿಂತ ಹೂವಿನಂತ ಮನಸುಗಳು ಕೈಯಲ್ಲಿ ಹೂವನ್ನು ಹಿಡಿದು ಬದುಕನ್ನು ಅರಳಿಸುವುದಕ್ಕೆ ಕಾಯುತ್ತಿದ್ದರು. ಗಿಡದಲ್ಲಿ ಅರಳಿದ ಹೂವು ಯಾವ ದೇವರ ಗುಡಿಗೋ, ಯಾವು ದೇವತೆಯ ಮುಡಿಗೋ ಅರಿವಾಗದೆ ಅವರ ಕೈಯನ್ನ ಬಿಸಿ ಮಾಡ್ತಾನೆ ಸಮಯ ತಳ್ಳುತ್ತಿದ್ದವು. ಬಿಸಿಲು ಹೆಚ್ಚಾಗಿತ್ತು ದೇಹದ ಬೆವರು ನೆಲಕ್ಕೆ ಇಳಿಯುತ್ತಿದ್ದೆ. ಕಣ್ಣುಗಳು ಬಂದು ಖರೀದಿಸುವವರ ನಿರೀಕ್ಷಿಯಲ್ಲಿ ಕಾಯುತ್ತಿತ್ತು. ಸಮಯ ಹಿಡಿಯುತ್ತಾ ಇತ್ತು, ಹಬ್ಬಕ್ಕೆ ಮನೆಗೆ ವಿಶೇಷವೇನಾದರೂ ಖರೀದಿ ಆಗಬೇಕಿತ್ತು, ಕೈ ಖಾಲಿಯಾಗಿದ್ದ ಕಾರಣ ಇದ್ದ ನಾಲ್ಕು ಮಾಲೆಗಳಾದರೂ ಖರೀದಿಸಲಿ ಯಾರಾದರೂ ಅನ್ನುವ ದೈನ್ಯ ಸ್ಥಿತಿಯಲ್ಲಿ ಅವರು ಕಾಯುತ್ತಾನೆ ಇದ್ದರು. ಹಬ್ಬಕ್ಕಾಗಿ ಹೂವು ಖರೀದಿಯಾದರೆ ಅವರ ಮನೆಯ ದೀಪ ಬೆಳಗಬಹುದು. ಸೂರ್ಯನ ಬಿಸಿಲಿನ ಬೆಳಗಿಗೆ ಅವರು ಕಪ್ಪಾಗುತ್ತಿದ್ದರು ಹಾಗೆ ಕಪ್ಪಾಗುವುದರಿಂದ ಮನೆ ಬೆಳಕಾಗುತ್ತೆ ಅನ್ನೋದು ಅವರ ಯೋಚನೆ. ಹಾಗಾಗಿ ಎಲ್ಲವೂ ಕಾಲ ನಿರ್ಣಯ ಒಂದಕ್ಕೊಂದು ಕೊಂಡಿ ಜೋಡಣೆಯಾಗಬೇಕು.ಅವರ ಹೂವು ಖರೀದಿಯಾಗಿ ಮನೆಯ ದೇವರ ಪದತಲಕ್ಕೆ ಸಮರ್ಪಿತವಾದಾಗ ಇವರ ಮನೆಯ ದೇವರ ಚಿತ್ರದ ಕೆಳಗಡೆ ಪುಟ್ಟ ದೀಪ ಅರಳಿ ನಗುತ್ತದೆ. ಭಗವಂತ ನಗುತ್ತಾ ಇದ್ದ ಖರೀದಿಸುವವರನ್ನು ಅತ್ತಕಡೆಗೆ ಕಳುಹಿಸಿದ್ದ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ