ಸ್ಟೇಟಸ್ ಕತೆಗಳು (ಭಾಗ ೧೧೩೩)- ಪ್ರೀತಿ
ಆಗಾಗ ಕದ್ದು ನೋಡ್ತಾರೆ ಅವಳ ಕಣ್ಣನ್ನ ಪ್ರೀತಿಯಿಂದ ಗಮನಿಸ್ತಾರೆ, ತುಂಟಾಟವಾಡುತ್ತಾರೆ ಪ್ರತಿಯೊಂದು ಪುಟ್ಟ ಕೆಲಸದಲ್ಲಿ ಸಹಾಯ ಮಾಡುತ್ತಾರೆ, ಇಬ್ಬರೇ ಕುಳಿತು ಲೋಕಭಿರಾಮವಾಗಿ ಹರಡುತ್ತಾರೆ, ಕೈಯಲ್ಲಿ ಒಂದು ಚಹಾ ಹಿಡಿದು ಹಳೆಯ ನೆನಪುಗಳನ್ನು ನೆಲಕ ಹಾಕ್ತಾರೆ, ಅವರು ಇನ್ನೂ ಪ್ರೀತಿಸುತ್ತಿದ್ದಾರೆ. ವಯಸ್ಸು 75 ಆದರೂ ಅವರೊಡಗಿನ ಪ್ರೀತಿ ಒಂದಂಶ ಕಡಿಮೆಯಾಗಿಲ್ಲ ಅಂದು ಜೊತೆಗೆ ಕೆಲಸ ಮಾಡುತ್ತಿದ್ದಾಗ ಕಣ್ಣೋಟದಲ್ಲಿ ಪರಿಚಯವಾದದ್ದು ಮಾತುಕತೆಗಿಳಿದು ಬದುಕಿನ ದಿವ್ಯ ಸಂಬಂಧವನ್ನು ಅವರಿಬ್ಬರ ನಡುವೆ ಹಾಗೆ ಬಿಟ್ಟಿದ್ದು ಅನುಮತಿ ಅಷ್ಟು ಸುಲಭವಿರಲಿಲ್ಲ ಆದರೂ ಪ್ರೀತಿಗಟ್ಟಿ ಇದ್ದ ಕಾರಣ ಬದುಕು ಗಟ್ಟಿಯಾಗುವ ನಿರ್ಧಾರವನ್ನು ಅವರು ತೆಗೆದುಕೊಂಡು ಮನೆಯವರು ಒಪ್ಪಿದ್ರು ಅಂದಿನಿಂದ ಇಂದಿನವರೆಗೆ ಪ್ರೀತಿ ಅಂದೆ ಅವರ ಆದ್ಯ ಮಂತ್ರವಾಗಿದೆ. ಪ್ರತಿ ದಿನ ಬದುಕುವುದಕ್ಕೆ ಪ್ರೀತಿ ಕಾರಣ ನೆಮ್ಮದಿಗೆ ಸಂಭ್ರಮಕ್ಕೆ ಹೊಸತನಕ್ಕೆ ಹೊಸ ವಿಚಾರಗಳಿಗೆ ಎಲ್ಲದಕ್ಕೂ ಪ್ರೀತಿ ಕಾರಣವಾಗಿದೆ. ಪ್ರತಿ ದಿನವೂ ಪ್ರೀತಿ ಹೆಚ್ಚಾಗಿದ್ದರೆ ಹೊರತು ಒಂದಂಶ ಕಡಿಮೆಯಾಗಿಲ್ಲ. ತಮ್ಮ ಪ್ರೀತಿಯನ್ನು ಹಂಚಿದ್ದಾರೆ ಗಿಡ ಮರಗಳಿಗೆ, ಬಳ್ಳಿಗೆ, ಪ್ರಾಣಿ, ಪಕ್ಷಿಗಳಿಗೆ, ಅಕ್ಕಪಕ್ಕದ ಮನೆಯವರಿಗೆ ಹೀಗೆ ಎಲ್ಲರೊಳಗೂ ಪ್ರೀತಿಯನ್ನು ಹಂಚಿ ಪ್ರೀತಿಯ ತೂಕವನ್ನ ಒಂದು ಕೈ ಹೆಚ್ಚಿಗೆ ಮಾಡಿದ್ದಾರೆ ಅವರ ಪ್ರೀತಿಗೆ ಕರಗದವರಿಲ್ಲ, ದ್ವೇಷಿಸುವ ಕಾಗದ ಪುಟ್ಟ ಜೀವಗಳು ಮಾದರಿಯಾಗಿ ಆ ಊರ ಆ ಊರಲ್ಲಿ ಬದುಕುತ್ತಿವೆ. ಆ ಪ್ರೀತಿಯನ್ನು ಗಮನಿಸಿ ಆ ಊರಿಗೆ ಪ್ರೇಮಪುರ ಎಂಬ ಹೆಸರನ್ನ ಯಾರೋ ಹಿಂದಿನವರು ಇಟ್ಟು ಹೋಗಿದ್ದಾರೆ ಅವರಿಂದಾಗಿ ಊರು ಬದಲಾಗುತ್ತಿದೆ.. ಇವ ಮನಸ್ಸುಗಳು ಬದಲಾಗಿದೆ ಎಲ್ಲವೂ ಪ್ರೀತಿಯಿಂದ ಸಾಧ್ಯವಾಗುತ್ತೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ