ಸ್ಟೇಟಸ್ ಕತೆಗಳು (ಭಾಗ ೧೧೩೬)- ಬಾಂಧವ್ಯ

ಸ್ಟೇಟಸ್ ಕತೆಗಳು (ಭಾಗ ೧೧೩೬)- ಬಾಂಧವ್ಯ

ಬಾಡಿಗೆ ಮನೆಯಲ್ಲಿ ಬದುಕುತ್ತಿರುವವರ ಬಳಿಗೆ ಪುಟ್ಟ ನಾಯಿಮರಿಯೊಂದು ಬದುಕುವುದಕ್ಕೆ ಜೊತೆಯಾಯಿತು. ಅದು ಬಾಡಿಗೆ ಮನೆಯಂತೆ ಆಗಾಗ ಬಂದು ಹೋಗ್ತಾ ಇತ್ತು. ಅವರು ನಾಯಿಯ ಜೊತೆಗೆ ಆತ್ಮೀಯ ಸಂಬಂಧವನ್ನು ಬೆಳೆಸಿಕೊಂಡಿದ್ದರು ಮನೆಯೊಡತಿ ಅಂದರೆ ನಾಯಿಗೆ ವಿಪರೀತ ಇಷ್ಟ. ಅವಳ ಎಲ್ಲ ಭಾವನೆಗಳನ್ನು ಅದು ಅರ್ಥ ಮಾಡಿಕೊಳ್ಳುತ್ತಿತ್ತು. ಅವಳಿಗೆ ನೋವಾದರೆ ನಾಯಿ ಮೌನವಾಗ್ತಾ ಇತ್ತು. ಅವಳನ್ನು ಸಂತೋಷಪಡಿಸುವುದಕ್ಕೆ ವಿವಿಧ ರೀತಿಯ ಪ್ರಯತ್ನವನ್ನು ಪಡ್ತಾ ಇತ್ತು. ಮನೆ ಒಡತಿಗೆ ತನ್ನೂರಿಗೆ ಹೊರಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿ ನಾಲ್ಕು ದಿನಗಳ ನಂತರ ಮತ್ತೆ ಮನೆಗೆ ಬಂದಾಗ ಆ ನಾಯಿ ಕಾಣಿಸಲೇ ಇಲ್ಲ. ನಾಯಿಗೂ ಮನೆಯೊಡತಿಯನ್ನು ಹುಡುಕಿ ಹುಡುಕಿ ಬೇಸರವಾಗಿ ಹೋಗಿದಿಯೋ, ಈ ಮುದ್ದಿನ ನಾಯಿ ಮರಿಯನ್ನ ನೋಡಿ ಯಾರಾದರೂ ತೆಗೆದುಕೊಂಡು ಹೋಗಿದ್ದಾರೋ? ಏನಾದರೂ ಅವಘಡವಾಗಿದೆಯೋ ಗೊತ್ತಿಲ್ಲ. ಆಕೆ ತನ್ನ ದೈನಂದಿನ ವೇಳೆಯಂತೆ ಆ ನಾಯಿಗೆ ಎದುರು ನೋಡುತ್ತಾಳೆ. ಪ್ರತಿಕ್ಷಣವೂ ಯೋಚಿಸುತ್ತಾಳೆ ಆಗಾಗ ಕಣ್ಣೀರುತ್ತಾಳೆ ಬಾಂಧವ್ಯಗಳು ಕ್ಷಣಗಳಲ್ಲಿ  ಜೋಡಣೆಯಾಗುತ್ತವೆ. ಕಡಿದುಕೊಳ್ಳುವ ಭಯ ತುಂಬಾ ದೊಡ್ಡದು ಆಕೆ ಆಗಾಗ ಅಂದುಕೊಳ್ಳುತ್ತಾಳೆ ಎಲ್ಲವನ್ನು ಹಚ್ಚಿಕೊಳ್ಳಬಾರದು ಅದು ತುಂಬಾ ನೋವು ನೀಡುತ್ತದೆ. 

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ