ಸ್ಟೇಟಸ್ ಕತೆಗಳು (ಭಾಗ ೧೧೩೮)- ಉತ್ತರವಿಲ್ಲದ ಪ್ರಶ್ನೆ !
ಇದು ನಮ್ಮೂರಿನ ಕಥೆಯಲ್ಲ. ನಮಗೆ ಯಾರಿಗೂ ಪರಿಚಯ ಇರದೇ ಇರುವ ಯಾವುದೋ ಒಂದು ಊರಿನ ಕಥೆ. ಆತ ಪರೀಕ್ಷೆ ಬರೆದಿದ್ದ, ಉತ್ತಮ ಅಂಕಗಳು ಲಭಿಸುವ ನಿರೀಕ್ಷೆಯಲ್ಲಿ ಇದ್ಧ. ಯಾಕಂದ್ರೆ ಆ ವಿಷಯ ಆತನಿಗೆ ತುಂಬಾ ಆಸಕ್ತಿ ಹುಟ್ಟಿಸುವಂತದ್ದು. ಅದಲ್ಲದೆ ಹಿಂದಿನ ಎಲ್ಲಾ ಪರೀಕ್ಷೆಗಳಲ್ಲೂ ಆ ವಿಷಯದಲ್ಲಿ ನೂರಕ್ಕೆ 90 ಅಂಕಗಳನ್ನು ಪಡೆದುಕೊಂಡಿದ್ದಾತ. ಆದರೆ ಪರೀಕ್ಷೆಯ ಫಲಿತಾಂಶ ಆತನ ಕಣ್ಣ ಮಂದಿತ್ತು. ಆತನಿಗೆ ಲಭಿಸಿದ ಅಂಕ 20. ಆತ ಇದು ತನ್ನ ಅಂಕ ಅಲ್ಲವೆಂದು ಎಷ್ಟೇ ಬಾರಿ ಪರೀಕ್ಷಾಂಗ ಕಚೇರಿಗೆ ಹೋಗಿ ಹೇಳಿದ್ರು ಕೂಡ ಅವರು ಅದನ್ನ ಕೇಳುವ ವ್ಯವಧಾನವೇ ತೋರಿಸಲಿಲ್ಲ. ಆತನಿಗೆ ತುಂಬಾ ನಿಖರವಾಗಿ ತಿಳಿದಿತ್ತು. ತಾನಿದ್ರಲ್ಲಿ ಹೆಚ್ಚು ಅಂಕವನ್ನು ಪಡೆದಿದ್ದೇನೆ ಎಂದರೂ ನಂಬುವವರಿಲ್ಲ. ಪರೀಕ್ಷೆಯಲ್ಲಿ ಉತ್ತರ ಪತ್ರಿಕೆಯೇ ನಮ್ಮ ಬಳಿ ಇಲ್ಲ ಎನ್ನುವ ಉತ್ತರ ದೊಡ್ಡವರಿಂದ ಬಂದಿತು. ಆತನ ಭವಿಷ್ಯದ ಒಂದು ವರ್ಷ ಅಲ್ಲೇ ಕುಂಠಿತವಾಯಿತು. ಆತ ಈಗ ಕುಳಿತು ಯೋಚಿಸುತ್ತಿದ್ದಾನೆ ನನ್ನ ಬದುಕಿನ ದಾರಿಗಳ ಅಡೆತಡೆಗೆ ಈಗ ಕಾರಣ ಯಾರು? ಉತ್ತರ ತಿದ್ದಿದವರೇ, ಉತ್ತರ ಪತ್ರಿಕೆಯನ್ನು ಇಟ್ಟುಕೊಳ್ಳಬೇಕೆಂದು ತಿಳಿದಿರುವವರೇ? ಗೊತ್ತಿಲ್ಲ. ಆತನ ಬದುಕಿನ ದಾರಿಯನ್ನ ಅಡ್ಡ ಹಾಕಿದವರು. ಕಾಲ ಖಂಡಿತವಾಗಿಯೂ ತಿರುಗುತ್ತದೆ. ಅವರ ಬದುಕಿನ ಹಲವು ಪರೀಕ್ಷೆಗಳಿಗೆ ಅವರು ಉತ್ತರವೇ ಇಲ್ಲದಂತಾಗುವ ಸ್ಥಿತಿ ಖಂಡಿತ ಬರುತ್ತದೆ ಅನ್ನುವ ನಂಬಿಕೆಯಲ್ಲಿ ಮಾತ್ರ ಆತ ಕಾಯುತ್ತಿದ್ದಾನೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ