ಸ್ಟೇಟಸ್ ಕತೆಗಳು (ಭಾಗ ೧೧೪೩)- ಚಿವುಟೋದ್ಯಾಕೆ?

ಸ್ಟೇಟಸ್ ಕತೆಗಳು (ಭಾಗ ೧೧೪೩)- ಚಿವುಟೋದ್ಯಾಕೆ?

ನಾನೇನು ತಪ್ಪು ಮಾಡಿದ್ದೇನೆ. ನನಗೆ ಏಕೆ ಈ ತರಹದ ಶಿಕ್ಷೆ ನೀಡುವುದಕ್ಕೆ ಅಪ್ಪ ಹೊರಟಿದ್ದಾರೆ ತಿಳಿಯುತ್ತಿಲ್ಲ. ಎತ್ತರವಾದ ಸೇತುವೆ ಮೇಲೆ ನನ್ನನ್ನು ಅಪ್ಪಿ ಹಿಡಿದುಕೊಂಡು ನಮ್ಮ ಬದುಕಿನ ಕೊನೆಯ ಕ್ಷಣವಿದು ಇನ್ಮುಂದೆ ಈ ಭೂಮಿಯಲ್ಲಿ ನಿನಗೆ ಬದುಕುವುದಕ್ಕೆ ಸಾಧ್ಯವಾಗುವುದಿಲ್ಲ ನಾನಿಲ್ಲವಾದರೆ ನಿಮ್ಮ ಬದುಕು ಇನ್ನಷ್ಟು ಕಠಿಣವಾಗಬಹುದು, ಉಪವಾಸ ಸಾಯುವ ದಿನವೂ ಬರಬಹುದು, ಹಾಗಾಗಿ ನನ್ನೊಂದಿಗೆ ನೀವು ಸತ್ತುಬಿಡಿ ಎಂದು ಮಾತನಾಡುತ್ತಾ ಸೇತುವೆ ಮೇಲೆ ನಿಂತಿದ್ದಾರೆ. ಹಾಗೆ ನಿಲ್ಲುವುದಕ್ಕೆ ಕಾರಣವೇನಿದ್ಯೋ ನನಗೆ ಗೊತ್ತಿಲ್ಲ. ನನಗೆ ಅಪ್ಪ-ಅಮ್ಮ ನನ್ನ ಬಿಟ್ಟಿರೋದಕ್ಕೆ ಆಸೆಯೂ ಇಲ್ಲ .ಆದರೆ ಈ ಭೂಮಿಗೆ ಅಂತ ಬಂದ ಮೇಲೆ ಹೆಚ್ಚು ದಿನ ಬದುಕಬೇಕು ಒಂದಷ್ಟು ಕೆಲಸ ಮಾಡಬೇಕು ಸಾಯುವ ಸಾಯಿಸುವ ಯೋಚನೆ ಅಪ್ಪನ ಮನಸ್ಸಲ್ಲಿ ಮೂಡಿದ್ಯಾಕೆ? ಇಷ್ಟು ದಿನ ಬದುಕಬೇಕು ಅಂತ ಅಂದುಕೊಂಡಿದ್ದ ಅಪ್ಪ ಈ ಕ್ಷಣದಿಂದ ಸಾಯ್ಬೇಕು ಅಂತ ತೀರ್ಮಾನ ಮಾಡಿದ್ದು ಯಾಕೆ? ಮುಂರಿನ ಜೀವನದಲ್ಲೂ ಹೀಗೇ ಆಗುತ್ತಾ? ಬದುಕು ಕಷ್ಟವಾಗಿ ಸಾಯ್ಬೇಕು ಅನ್ನುವಂತಹ ಯೋಚನೆ ಬರುತ್ತಾ? ನಾನು ಯಾವುದನ್ನು ಕಲಿಯಬೇಕು? ಅರಳುವ ಮೊದಲು ಚಿವುಟೋದ್ಯಾಕೆ?

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ