ಸ್ಟೇಟಸ್ ಕತೆಗಳು (ಭಾಗ ೧೧೪೬)- ನಗುತ್ತಿದ್ದಾಳೆ
ಅವಳು ನಗುತ್ತಾಳೆ, ನಗುವಿನಲ್ಲಿ ಸಂಭ್ರಮವಿಲ್ಲ, ಕಳೆದುಕೊಳ್ಳುವ ಭಯವಿದ್ದವಳು ಉಳಿಸಿಕೊಂಡಿದ್ದಾಳೆ. ಈಗ ಪ್ರತೀ ದಿನವೂ ನೋವಿದ್ದರೂ ನಗುತ್ತಿದ್ದಾಳೆ. ಜೊತೆಗಿದ್ದ ಜೀವಕ್ಕೆ ದೈರ್ಯ ತುಂಬಲು, ತನ್ನೊಳಗೆ ಚೈತನ್ಯ ಮರುಕಳಿಸಲು, ಬದುಕಿನ ಜೊತೆಗಾರರ ಸ್ಥೈರ್ಯ ಹೆಚ್ಚಿಸಲು, ಅವಳು ನಗುತ್ತಿದ್ದಾಳೆ, ಕಣ್ಣಿನಲ್ಲಿ ಭಯವಿದ್ದರೂ, ನೋವಿದ್ದರೂ ನಗುತ್ತಿದ್ದಾಳೆ, ನೋವೇ ಒಂದು ದಿನ ಮುಖ ತಿರುಗಿಸಿ ಅವಳ ಬಳಿಯಿಂದ ಹೊರಟು ಹೋಗಬೇಕು ಹಾಗಾಗಿ ನಗುತ್ತಿದ್ದಾಳೆ. ಅವಳಂತೆ ನಗುವ ಜೀವಗಳು ಕಣ್ಣ ಮುಂದೆ ಸಾವಿರ ಸಿಗುತ್ತವೆ... ನೋಡಿ ಮುಂದುವರೆಯಿರಿ... ನೀವೂ ನಕ್ಕು ಬಿಡಿ ಬದುಕು ಕಾಯುತ್ತಿದೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ