ಸ್ಟೇಟಸ್ ಕತೆಗಳು (ಭಾಗ ೧೧೫೦)- ವಾಸ್ತವ

ಸ್ಟೇಟಸ್ ಕತೆಗಳು (ಭಾಗ ೧೧೫೦)- ವಾಸ್ತವ

ಕಳೆದುಕೊಳ್ಳುವ ಭಯ ಕಾಡುವುದ್ದಕ್ಕೆ ಪ್ರಾರಂಭವಾದಾಗ ನಿನ್ನ ಜೊತೆಗಿದ್ದ ಜೀವವನ್ನ ಹೆಚ್ಚು ಪ್ರೀತಿಸುವುದಕ್ಕ ಆರಂಭ ಮಾಡುತ್ತೀಯಾ? ನನಗೆ ಈ ಮಾತು ಅಷ್ಟು ಸುಲಭಕ್ಕೆ ಅರ್ಥ ಆಗ್ತಾ ಇರ್ಲಿಲ್ಲ. ಎಲ್ಲಿಂದಲೋ ದಾರಿ ಕಾಣದ ಬೆಕ್ಕೊಂದು ಮನೆಗೆ ಬಂದು ನಮ್ಮ ಜೊತೆಗೆ ಆತ್ಮೀಯ ಸ್ನೇಹಿತನಾಯ್ತು. ನಾವು ಕೊಟ್ಟ ಪ್ರೀತಿಗೆ ತಿರುಗಿ ಹೆಚ್ಚೇ ಪ್ರೀತಿಯನ್ನು ನೀಡುವುದಕ್ಕೆ ಆರಂಭ ಮಾಡಿತು. ಅದರ ಜೊತೆಗೆ ಗಟ್ಟಿಯಾದ ಬಾಂಧವ್ಯವನ್ನು ಬೆಳೆಸಿಕೊಂಡೆವು. ಆದರೆ ಈಗ ಮನಸ್ಸಿನೊಳಗೆ ಓಡುತ್ತಿರುವ ಪ್ರಶ್ನೆ ಆ ಬೆಕ್ಕು ನಮ್ಮ ಮನೆಯನ್ನು ತೊರೆದು ಮೂಲ ಮನೆಯನ್ನ ಯಾವತ್ತಾದರೂ ಒಂದು ದಿನ ಸೇರಬಹುದು ಅಲ್ಲವೇ? ಕೊನೆಯ ಕ್ಷಣದಲ್ಲಿ ಕಳೆದುಕೊಳ್ಳುವ ಭಯ ಮನಸ್ಸಿನ ಒಳಗೆ ಗಟ್ಟಿಯಾಗಿ ಮನೆ ಮಾಡಿತು. ಕಳೆದುಕೊಳ್ಳುವ ಭಯ ಯಾವಾಗ ಆರಂಭವಾಯಿತು ಆಗ‌ ಮನಸ್ಸು ಕಳವಳದಿಂದಲೇ ಇದ್ದು ವಾಸ್ತವದಲ್ಲಿ ಬೆಕ್ಕನ್ನು ಪ್ರೀತಿಸಲು ಭಯಪಡುವಂತೆ ಮಾಡುತ್ತಿತ್ತು. ಇದು ವಾಸ್ತವ ಸತ್ಯವೇ?

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ