ಸ್ಟೇಟಸ್ ಕತೆಗಳು (ಭಾಗ ೧೧೫೧)- ಪರಿಸ್ಥಿತಿ

ಕನಸು ಕಂಡದ್ದು ಅಪ್ಪ ಆ ಕನಸಿಗಾಗಿ ತನ್ನೂರನ್ನು ಬಿಟ್ಟು ಪರಿಚಯವಿಲ್ಲದ ಊರಿನಲ್ಲಿ ಹೊಸತರಹದ ಶಿಕ್ಷಣವನ್ನು ಪಡೆಯುತ್ತಿದ್ದಳಾಕೆ. ಆಕೆಯ ಪರಿಶ್ರಮ ಅಭ್ಯಾಸಕ್ಕೆ ಖಂಡಿತಾ ಶಿಕ್ಷಣದ ಮುಂದಿನ ದಾರಿಗಳ ಬಗ್ಗೆ ಯೋಚಿಸುತ್ತಿರುವಾಗಲೇ ಮನೆಯಲ್ಲಿ ತಂದೆಯ ಆರೋಗ್ಯ ಕೈ ಕೊಟ್ಟಿತು. ಆರೋಗ್ಯದಲ್ಲಿ ಏರುಪೇರಾಗಿ ಸಾವು ಬದುಕಿನ ನಡುವೆ ಹೋರಾಡಿ ಆರೋಗ್ಯವನ್ನು ಮತ್ತೆ ಧರಿಸಿ ಅಪ್ಪ ಮನೆಗೆ ಬಂದರು. ಅಪ್ಪನ ಆರೋಗ್ಯದ ಕಡೆಗೆ ಓಡಾಡುತ್ತಾ ಓಡಾಡುತ್ತಾ ಶೈಕ್ಷಣಿಕವಾಗಿ ಸಾಧನೆ ಸಾಧ್ಯವಾಗಲಿಲ್ಲ. ಅಪ್ಪನ ಕನಸು ಅಲ್ಲಿ ಚಿವುಟಿ ಹೋಯಿತು. ದೈನಂದಿನ ಬದುಕಿಗೆ ಕೆಲಸವೊಂದನ್ನ ಅರಸಬೇಕಾಗಿತ್ತು. ಈ ಮನೆಯನ್ನು ತೊರೆದು ಇನ್ನೊಂದು ಮನೆ ಬೆಳಗಬೇಕಾದವಳು ತನ್ನ ಮನೆಯ ಜವಾಬ್ದಾರಿಯನ್ನ ಮರೆಯಲಿಲ್ಲ. ಪುಟ್ಟ ಶಾಲೆಯೊಳಗೆ ಮಕ್ಕಳ ಬದುಕನ್ನ ಬೆಳಗಿಸುವ ಕೆಲಸವನ್ನ ಆರಂಭಿಸಿದಳು. ಅಪ್ಪ ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ಗಟ್ಟಿಯಾಗಿ ನಿಲ್ಲುವುದಕ್ಕೆ ಕಾಯುತ್ತಿದ್ದಾಳೆ. ಅಪ್ಪ ಗಟ್ಟಿಯಾಗಿ ನಿಂತ ಮೇಲೆ ತಾನು ಗಟ್ಟಿ ನಿರ್ಧಾರವನ್ನು ತೆಗೆದುಕೊಂಡು ಬದುಕಬೇಕೆಂದು ತೀರ್ಮಾನಿಸಿದ್ದಾಳೆ. ಭಗವಂತ ಮತ್ತೆ ಮತ್ತೆ ಪರೀಕ್ಷೆಗಳನ್ನ ಕೊಡುತ್ತಾನೆ. ನಾವು ಅದರಲ್ಲಿ ಉತ್ತೀರ್ಣರಾಗಿ ಮುಂದಿನ ಹಂತಕ್ಕೆ ತೇರ್ಗಡೆಯಾಗಬೇಕಷ್ಟೇ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ