ಸ್ಟೇಟಸ್ ಕತೆಗಳು (ಭಾಗ ೧೧೫೩)- ವೇದಿಕೆ
ವೇದಿಕೆ ಅಳುತ್ತಿದೆ. ಇಷ್ಟು ದಿನದವರೆಗೆ ಎಲ್ಲಾ ಕಾರ್ಯಕ್ರಮವೂ ತುಂಬಾ ಮುತುವರ್ಜಿಯಿಂದ ಸಮಯ ಪಾಲನೆ ಸಾಧಿಸಿಕೊಂಡು ಒಂದು ಚೂರು ತಪ್ಪಿಲ್ಲದಂತೆ ಜನರ ಮನಸ್ಸಿಗೆ ನೋವಾಗದಂತೆ ರೂಪಿತವಾದ ಕಾರ್ಯಕ್ರಮವನ್ನು ನಡೆಸುತ್ತಲೇ ಇತ್ತು. ಆದರೆ ಆ ದಿನ ಆಯೋಜಿಸಿದ ಕಾರ್ಯಕ್ರಮವನ್ನು ಕಂಡು ವೇದಿಕೆ ಮೌನವಾಗಿದೆ. ಸಮಯಕ್ಕೆ ವೇದಿಕೆ ತಯಾರಾಗಿ ಕಾಯುತ್ತಿತ್ತು ಅತಿಥಿಗಳು ಬಂದಿದ್ರು ಸಂಘಟಕರು ಅಲ್ಲಿ ಯಾರು ಕಾಣಲೇ ಇಲ್ಲ. ವೇದಿಕೆಯಲ್ಲಿ ಆಯೋಜಿಸಿದ ಎಲ್ಲ ಕಾರ್ಯಕ್ರಮದಲ್ಲೂ ಸಮಯ ಪಾಲನೆ ಶಿಸ್ತು ಯಾವುದು ಕಂಡು ಬರಲೇ ಇಲ್ಲ. ಕಾರ್ಯಕ್ರಮವಾಗಬೇಕು ಅನ್ನುವ ನಿಟ್ಟಿನಲ್ಲಿ ರೂಪಿಸಿದ ಹಾಗಿತ್ತು. ವೇದಿಕೆ ಮೌನವಾಯಿತು. ತನ್ನ ಮೇಲೆ ನಿಂತು ಜನರನ್ನ ರಂಜಿಸುವವರು ಹಿತನುಡಿಗಳನ್ನಾಡುವವರು ಎಲ್ಲರೂ ನೋವಿನಿಂದ ತಲೆತಗ್ಗಿಸಿ ಹೊರಟುಬಿಟ್ಟರು. ಹಾಗಾಗಿ ವೇದಿಕೆ ಮೌನವಾಯಿತು. ಮತ್ತೆ ವೇದಿಕೆ ಬೇಡಿಕೊಳ್ಳುತ್ತಿದೆ ಆಯೋಜಿಸುವ ಮೊದಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡು ನನ್ನ ಮೇಲೆ ಏರಿ ನನಗೆ ನನ್ನ ಮೇಲೆ ಏರಿದವನು ನೋವಿನಿಂದ ಕೆಳಗಿಳಿಯುವುದಿಷ್ಟವಿಲ್ಲ. ವೇದಿಕೆ ಮೌನವಾಯಿತು…
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ