ಸ್ಟೇಟಸ್ ಕತೆಗಳು (ಭಾಗ ೧೧೫೮)- ಬದುಕು
ಅಪ್ಪ ಈ ಬದುಕು ಹೇಗಿರಬೇಕು?
ಅಪ್ಪನ ಉತ್ತರ ತುಂಬಾ ಸುಲಭವಾಗಿತ್ತು, ನೀನು ಹೆಚ್ಚು ದಿನ ಬದುಕೋದಿಲ್ಲ ಇನ್ನೊಂದೆರಡು ದಿನದಲ್ಲಿ ಸಾಯಬಹುದು ಅಂದುಕೊಂಡು ಈ ಕ್ಷಣವನ್ನು ಅದ್ಭುತವಾಗಿ ಅನುಭವಿಸಿ ಬದುಕಿ ಬಿಡು. ಸಾಯುವ ಕೊನೆ ಕ್ಷಣದಲ್ಲಿ ನನ್ನಿಂದ ಹೀಗೆ ಬದುಕುವುದಕ್ಕಾಗಲಿಲ್ಲವಲ್ಲ ಅನ್ನುವ ಕೊರಗು ಇರಬಾರದು. ಇನ್ನೂ ಈ ಕಲಿಯೋದೇನಿದ್ದರೂ ಮುಂದಿನ ದೊಡ್ಡ ಬದುಕಿಗೆ ಉಪಯೋಗಕ್ಕೆ ಬರುತ್ತದೆ ಎನ್ನುವ ಯೋಚನೆಯಲ್ಲಿ ಹೊಸ ಹೊಸ ವಿಚಾರಗಳನ್ನು ಕಲಿತಾ ಹೋಗು. ಈ ಎರಡು ಆಲೋಚನೆಗಳು ನಿನ್ನಲ್ಲಿದ್ದರೆ ಇನ್ನೂ ಬದುಕು ತುಂಬಾ ಅದ್ಭುತವಾಗಿರುತ್ತೆ. ಕಣ್ಣ ಮುಂದೆ ಕಾಣುವುದೆಲ್ಲವೂ ಬದುಕಲ್ಲ ನಿನ್ನ ಜೀವನದ ಪ್ರತಿ ಕ್ಷಣಕ್ಕೆ ಏನು ಎದುರಾಗುತ್ತಲ್ಲ ಅದು ಬದುಕು. ಕೆಲವೊಂದು ಸಲ ನಿನ್ನ ಬದುಕಿನಲ್ಲಿ ಕನಸು ಕನಸಾಗಿ ಉಳಿದುಬಿಡಬಹುದು ಕನಸು ಕನಸಾಗಿರುವಾಗಲೇ ನನಸಾಗಿ ಬಿಡಬಹುದು, ಕೆಲವು ನನಸುಗಳು ಕನಸಾಗಬಹುದು. ಅಪ್ಪನ ಜೀವನದ ಎಲ್ಲಾ ಅನುಭವಗಳು ಅವರ ಮಾತಿನಲ್ಲಿತ್ತು. ಅಷ್ಟನ್ನು ಪಾಲಿಸುವುದಕ್ಕಾಗಿಲ್ಲದಿದ್ದರೂ ಕೆಲವೊಂದನ್ನಾದರೂ ಪಾಲಿಸಬೇಕೆಂಬ ನಿರ್ಧಾರದಿಂದ ಮೊಗದಲ್ಲಿ ನಗು ತಂದುಕೊಂಡು ಒಂದು ಹೆಜ್ಜೆ ಮುಂದೆ ಇಟ್ಟೆ
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ