ಸ್ಟೇಟಸ್ ಕತೆಗಳು (ಭಾಗ ೧೧೫೯)- ಸರಿ ತಪ್ಪು
ತಪ್ಪುಗಳ ಮೂಟೆಗಳನ್ನ ಹೊತ್ತುಕೊಂಡವ ನೀನು. ಬೇರೆಯವರ ಭಾರದ ಬಗ್ಗೆ ಯೋಚನೆ ಯಾಕೆ? ನಿನ್ನ ಕಾರ್ಯಕ್ಕೆ ಸಮಯ ಮಾಡಿಕೊಂಡು ಜೊತೆಯಾದವರು ಹಲವರು, ಅವರ ನಿಜದ ಸ್ಥಿತಿ ನಿನಗೆ ಗೊತ್ತಿಲ್ಲ. ನಿನಗೆ ಅವರಿಂದ ಉಪಯೋಗವೂ ಆಗಿದೆ ಆದರೆ ಅವರಿಗೆ ನಿನ್ನಿಂದ ದೊರಕಿರುವುದು ಏನು? ನಿನಗೀಗ ಅವರ ಅಗತ್ಯಕ್ಕೆನೀಡಲು ಸಮಯವೂ ನಿನ್ನಲ್ಲಿಲ್ಲ. ನೀನೀಗ ಪರಿಸ್ಥಿತಿಗಳನ್ನ ದೂರುತ್ತಿದ್ದೀಯಾ? ಇದು ಸರಿಯಾ? ಕಾಲಕ್ಕೆ ಬೇಕಾದ ಹಾಗೆ ಬಳಸಿಕೊಂಡು ನೀನು ಮೇಲೇರಿದ್ದೀಯಾ? ನಿನಗೆ ಸಮಯ ಮಾಡಿಕೊಂಡವರಿಗೆ ನಿನ್ನಲ್ಲಿ ನೀಡಲು ಸಮಯವಿಲ್ಲಾ ಅಲ್ವಾ? ಒಮ್ಮೆ ಯೋಚಿಸು. ತುಂಬಾ ಸಿಟ್ಟಿನಿಂದ ಚಿದಂಬರ ಇಷ್ಟು ಮಾತುಗಳನ್ನ ಹೇಳಿ ಹೋದ. ಈಗ ಯೋಚಿಸುವ ಸರದಿ ನನ್ನದು. ಇನ್ನೂ ಬದಲಾಗದಿದ್ದರೆ ಕಾಲೆಡವಿ ಬಿದ್ದಾಗ ಎದ್ದು ನಿಲ್ಲಿಸಲು ಜನವಿಲ್ಲದಾಗಬಹುದು.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ