ಸ್ಟೇಟಸ್ ಕತೆಗಳು (ಭಾಗ ೧೧೬೦)- ಕರ್ಮ
ಭಗವಂತ ನಗುತ್ತಿದ್ದಾನೆ ಈ ಮನುಜನ ಕಂಡು. ಆತನ ಆಲೋಚನೆ ನಾನು ತುಂಬಾ ತೊಂದರೆ ಮೋಸ ಅನ್ಯಾಯ ಮಾಡಿದರೂ ನನಗೇನೂ ಸಮಸ್ಯೆ ಆಗಿಲ್ಲ, ಆಗೋದಿಲ್ಲ. ಕರ್ಮ ಅನ್ನೋದು ಸುಳ್ಳು, ಅದ್ಯಾವುದೂ ತಿರುಗಿ ಬರೋದಿಲ್ಲ. ಈಗ ಬದುಕಬೇಕು. ಅಷ್ಟೇ ಬದುಕು. ಇದೇ ಯೋಚನೆಯಲ್ಲಿ ಕಾಲ ಕಳಿತಾ ಇದ್ದ ಆದರೆ ಮೇಲೆ ಕುಳಿತ ಭಗವಂತ ಸುಮ್ಮನೆ ನಕ್ಕು ತನ್ನ ಮಾತುಗಳನ್ನ ಪಿಸು ದನಿಯಲ್ಲಿ ಉಸುರಿದ ಮಗು ಕರ್ಮ ಯಾವತ್ತಿದ್ರೂ ಬಿಡುವುದಿಲ್ಲ ನೀನು ಮಾಡಿದ ತಪ್ಪಿಗೆ ನಿನಗೆ ಶಿಕ್ಷೆ ಸಿಗಬೇಕು ಅಂತ ಏನೂ ಇಲ್ಲ ನಿನ್ನ ತುಂಬಾ ಆತ್ಮೀಯರಾದವರು ನಿನ್ನ ಕೈ ಬಿಟ್ಟು ಹೋಗಬಹುದು, ಅವರ ನೋವಿನಲ್ಲಿ ನೀನು ಕೊರಗಬೇಕಾದ ಪರಿಸ್ಥಿತಿ ಎದುರಾಗಬಹುದು. ಅವರ ಜೀವನ ನಿರೀಕ್ಷೆಗಳು ತಿರುವುಗಳಿಂದ ಪೂರ್ತಿ ಹಾಳಾಗಿ ಹೋಗಿ ನಿನ್ನ ಕಣ್ಣೆದುರು ಅವರು ಕಣ್ಣೀರು ಇಳಿಸುವಂತಹ ದಿನ ಹತ್ತಿರವಾಗಬಹುದು. ಇದನ್ನೇ ಕರ್ಮ ಅನ್ನೋದು. ಭಗವಂತ ಇದನ್ನು ಅರ್ಥಮಾಡಿಕೊಳ್ಳಿ ಅಂತಂದು ಮೌನವಾಗಿ ಬಿಟ್ಟ. ನಮಗೆ ಮೌನದ ಮಾತು ಕೇಳೋದಿಲ್ಲ ನೋಡಿ ಹಾಗಾಗಿ ನಮಗೂ ಅರ್ಥ ಆಗದೆ ಹಾಗೆ ಬದುಕು ಮುಂದುವರೆಸ್ತಾ ಇದ್ದೇವೆ…
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ