ಸ್ಟೇಟಸ್ ಕತೆಗಳು (ಭಾಗ ೧೧೬೬)- ಶವ

ಸ್ಟೇಟಸ್ ಕತೆಗಳು (ಭಾಗ ೧೧೬೬)- ಶವ

ಹೆಗಲಿಂದ ಶವವನ್ನು ಇಳಿಸಿ ಬಿಡು ಮಾರಾಯ. ಹೊತ್ತಿರುವ ಶವವನ್ನಾದರೂ ಮಸಣದವರಗಷ್ಟೇ ಹೊತ್ತು ಅಲ್ಲೇ ಮಣ್ಣು ಮಾಡುತ್ತಾರೆ ಅಥವಾ ದಹನ ಮಾಡುತ್ತಾರೆ. ಆದರೆ ಹಲವು ಸಮಯ ದಾಟಿದರೂ ನೀನು ಇಳಿಸುವ ಲಕ್ಷಣವೇ ಕಾಣುತ್ತಿಲ್ಲ. ಶವವು ಕೊಳೆತು ವಾಸನೆ ಬರುತ್ತಿದೆ. ಕೆಟ್ಟ ನೆನಪುಗಳಾಗಿರಬಹುದು, ಸೋಲಿನ ಪಾಠಗಳಾಗಿರಬಹುದು  ಗೆಲುವಿನ ರುಚಿ ಆಗಿರಬಹುದು ಈ ಶವಗಳನ್ನ ಒಂದಷ್ಟು ಸಮಯದವರೆಗೆ ಮಾತ್ರ ಇಟ್ಟುಕೊಂಡು ಮುಂದುವರೆಯಬೇಕು, ಅದಕ್ಕಿಂತ ಹೆಚ್ಚು ದೂರ ಹೋದರೆ ಹೆಗಲು ಭಾರವಾಗುತ್ತದೆ. ದೂರ ಸಾಗುವುದಕ್ಕೆ ಕಷ್ಟವಾಗುತ್ತದೆ. ಒಂದಷ್ಟು ಸಮಸ್ಯೆಗಳು ಎದುರಾಗುತ್ತದೆ. ಹಾಗಾಗಿ ಆ ಎಲ್ಲ ಹೆಣಗಳನ್ನ ಒಂದು ಕಡೆ ದಹನ ಮಾಡಿ  ಮುಂದೆ ಹೆಜ್ಜೆ ಇಡು. ಇನ್ನೊಂದಷ್ಟು ಸಾಗುವ ದಾರಿ ದೂರ ಇದೆ. ದಾರಿಯಲ್ಲಿ ಇನ್ನೊಂದಷ್ಟು ಹೆಣಗಳು ಸಿಗುತ್ತವೆ. ಅವುಗಳನ್ನ ಇನ್ನೊಂದಷ್ಟು ಹೆಚ್ಚು ಹೊತ್ತುಕೊಳ್ಳಬೇಡ ನೆನಪಿಟ್ಟುಕೋ ಹೆಣಗಳಿಗೆ ಆಗಾಗ ಮುಕ್ತಿ ಕೊಡಬೇಕು ದಾರಿಯಲ್ಲಿ ಸಿಕ್ಕ ಹಣ ಅನಾಮಿಕ ನನಗಿಷ್ಟು ಮಾತುಗಳನ್ನ ಯಾಕೆ ಹೇಳಿದನು ಅರ್ಥವಾಗಲಿಲ್ಲ ನಾನು ಹೆಣಗಳಿಗೆ ಮುಕ್ತಿ ಕೊಡುವ ಕೆಲಸಕ್ಕೆ ಮುಂದಡಿ ಇಟ್ಟಿದ್ದೇನೆ ನಿಮ್ಮಲ್ಲೂ ಹೆಣಗಳಿದ್ದರೆ ಮುಕ್ತಿಕೊಡಿ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ