ಸ್ಟೇಟಸ್ ಕತೆಗಳು (ಭಾಗ ೧೧೬೮) - ಆತನ ಸಿಟ್ಟು

ಸ್ಟೇಟಸ್ ಕತೆಗಳು (ಭಾಗ ೧೧೬೮) - ಆತನ ಸಿಟ್ಟು

ಅವನು ಸಿಟ್ಟುಗೊಳ್ಳುತ್ತಾನೆ, ವೇದಿಕೆಯ ಮೇಲೇರಿ ನಕ್ಕವರು ಕಾರ್ಯಕ್ರಮ‌ ಮುಗಿದ ಮೇಲೆ ಏನೊಂದು‌ ಕೆಲಸಕ್ಕೆ‌ ಕೈ ಜೊಡಿಸದೇ ಹಾಗೇ‌ ಹೊರಟು ಹೋಗುವವರನ್ನ ಕಂಡಾಗ ಸಿಟ್ಟುಗೊಳ್ಳುತ್ತಾನೆ. ಮಾತಿನಲ್ಲಿ ಬದುಕಿನ ದಾರಿ‌ ಹೇಳುವವರು ಅದನ್ನು ಪಾಲಿಸದೇ ಇದ್ದಾಗ ಸಿಟ್ಟುಗೊಳ್ಳುತ್ತಾನೆ, ಮಾಡುತ್ತಿರುವ ತಪ್ಪಿನ ಅರಿವಿದ್ದರೂ ಮತ್ತದನ್ನೇ ಮುಂದುವರಿಸುವವರ ಕಂಡು, ಸಮಯವಿದ್ದರೂ ಹೊಂದಿಸಿಕೊಳ್ಳದವರ ಕಂಡು, ಯಾರದ್ದೋ ಕೆಲಸಕ್ಕೆ ತನ್ನ ಶ್ರಮದ ಹೆಸರನ್ನ ಸೇರಿಸುವವರನ್ನ ಕಂಡು, ಉಪಯೋಗ ಪಡೆದುಕೊಂಡು ಮರೆಯುವವರನ್ನ ಕಂಡು, ಶ್ರಮ ಪಡದೇ ಗೆಲುವಿಗೆ ಹಂಬಲಿಸುವವರ ಕಂಡು , ಯಾರದ್ದೋ ಒತ್ತಾಸೆಯಿಂದ ಪದಕ ಸನ್ಮಾನಗಳಿಗೆ ಕೊರಳೊಡ್ಡುವವರ ಕಂಡು, ಆತ ಸಿಟ್ಟುಗೊಳ್ಳುತ್ತಾನೆ. ಆತನ ಸಿಟ್ಟಿಗೊಂದು ಅರ್ಥ ಇದೆ. ಆತನ‌ ಬಯಕೆ ಇಷ್ಟೆ ಈ ಸಾತ್ವಿಕ‌ ಸಿಟ್ಟಿನ‌ ವ್ಯಕ್ತಿಗಳು ಹೆಚ್ಚಾಗಬೇಕು, ಆಗ ಬದಲಾವಣೆ ಅನ್ನುತ್ತಾನೆ.‌ ನೀವೇನಂತೀರಿ?

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ