ಸ್ಟೇಟಸ್ ಕತೆಗಳು (ಭಾಗ ೧೧೬೯) - ಉತ್ತರ ಕೊಡಿ

ನಿನ್ನ ಆಲೋಚನೆಯನ್ನು ಬದಲಿಸು ಎಲ್ಲವೂ ಒಳ್ಳೆಯದಾಗುತ್ತೆ. ನಿಮ್ಮ ಮನೆಯ ದನಕ್ಕೆ ತಿನ್ನೋದಕ್ಕೆ ತಂದುಕೊಡುವ ಹುಲ್ಲು ನಿಮ್ಮೂರಿನದ್ದೆ, ಹಾಲು ಕರೆಯುವವನು ನೀನು, ಹಾಲು ನಿಮ್ಮದೇ, ಆದರೆ ಹಾಲಿನಿಂದ ಬೆಣ್ಣೆಯಾಗುವುದಕ್ಕೆ ಮೊಸರು ಕಡೆಯುವ ಪ್ರಕ್ರಿಯೆಯಲ್ಲಿ ನೀನು ಕುಡುಗೋಲನ್ನ ಯಾವುದೋ ಪರಿಚಯವಿಲ್ಲದ ಊರಿನಿಂದ ತಂದಿದ್ದೀಯಾ? ನಿನ್ನ ಪ್ರಕಾರ ಆ ಕುಡುಗೋಲಿನಿಂದ ಸ್ವಲ್ಪ ಹೆಚ್ಚೇ ಬೆಣ್ಣಿ ಸಿಗುತ್ತದೆ ಎನ್ನುವ ಯೋಚನೆ ಏನಾದರೂ ನಿನ್ನ ತಲೆಯಲ್ಲಿದ್ಯಾ? ನಿಮ್ಮ ಮನೆಯ ಕುಡುಗೋಲಿನಿಂದಲೂ ನಿನಗೆ ಸಿಗುವುದು ಅದೇ ಬೆಣ್ಣೆ. ಆದರೆ ನಿನ್ನ ವಿಪರೀತವಾದ ಆಲೋಚನೆ ಹಾದಿ ತಪ್ಪಿದ ಚಿಂತನೆಯಿಂದ ನಿನ್ನ ಮನೆಯ ಕುಡುಗೋಲನ್ನ ಮೂಲೆಗಿರಿಸಿದ್ದೀಯಾ. ಮೊದಲು ಎಲ್ಲಿಂದಲೋ ತಂದ ಕುಡುಗೋಲಿಗಿಂತ ನಿನ್ನ ಮನೆಯ ಕೊಡುವಲ್ಲಿಗೆ ಸ್ವಲ್ಪ ಹೆಚ್ಚು ಅವಕಾಶ ನೀಡು ಅದು ಹೊಸತೇನೇನಾದರೂ ಮಾಡುವುದಕ್ಕೆ ಪ್ರಯತ್ನವಾದರೂ ಕೊಡಬಹುದು. ಹಾಗಾಗಿ ಯೋಚಿಸು ಆ ಮೊಸರು ನಿನ್ನದಾದರೂ ನಿನ್ನ ಮೊಸರಿನ ಜೊತೆಗೆ ಕುಡುಗೋಲು ನಿನ್ನದಾಗಲಿ ಪರಿಚಯವಿಲ್ಲದ ಊರಿನ ಕುಡುಗೋಲಿಗೆ ಆಸೆಪಟ್ಟು ನಿನ್ನ ಮನೆಯ ಮೊಸರನ್ನ ಹಾಳು ಮಾಡಿಕೊಳ್ಳಬೇಡ.
ಹೀಗೆ ಮಾತನಾಡಿದವನ ಪರಿಚಯ ನನಗಿಲ್ಲ ಮತ್ತು ಆತನ ಮಾತು ಅರ್ಥವೂ ಆಗಲಿಲ್ಲ. ಆತ ನನ್ನ ಕೆಲಸದ ಬಗ್ಗೆಯೂ ವ್ಯಕ್ತಿತ್ವದ ಬಗ್ಗೆಯೂ ಕಾರ್ಯಗಳ ಬಗ್ಗೆ ಏನೋ ಹೇಳುತ್ತಿದ್ದಾನೆ. ಅದೇನು ಅಂತ ಕೇಳುವುದಕ್ಕೆ ಆತ ನಿಲ್ಲದೆ ಮುಂದುವರೆದು ಬಿಟ್ಟ. ಈಗ ನನಗೊಂದು ಉತ್ತರ ಬೇಕಾಗಿದೆ ಅದಕ್ಕೆ ನಿಮ್ಮ ಮುಂದಿದ್ದೇನೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ