ಸ್ಟೇಟಸ್ ಕತೆಗಳು (ಭಾಗ ೧೧೭೨) - ಹಾಡು

ಸ್ಟೇಟಸ್ ಕತೆಗಳು (ಭಾಗ ೧೧೭೨) - ಹಾಡು

ಬಾರೋ ಮಾರಾಯ ಪದಗಳು ವಾಕ್ಯಗಳಾಗಿ ಕಾಯುತ್ತಿವೆ. ನೀನು ಅದಕ್ಕೊಂದು ಒಪ್ಪುವ ರಾಗ ಹಾಕಿ ಹಾಡಿ ಬಿಡೋ ನಿನಗೇನು ಕಷ್ಟವಿಲ್ಲ ಪದಗಳನ್ನ ಜೋಡಿಸಿದ್ದಾರೆ ವಾಕ್ಯಗಳನ್ನ ರಚಿಸಿದ್ದಾರೆ ನೀನು ಅದರ ಭಾವಗಳಿಗೆ ಪೂರ್ಣವಾದ ವಾಕ್ಯಗಳನ್ನ ಸಂಯೋಜಿಸಿ ಹಾಡು ಹಾಡಬೇಕಷ್ಟೆ. ನಿನ್ನ ಹಾಗೆ ಹಲವಾರು ಜನ ಇದ್ದಾರೆ ಅವರೆಲ್ಲರೂ ಕೂಡ ಹಾಡನ್ನು ಹಾಡುವುದಕ್ಕೆ ತುಂಬಾ ಕಷ್ಟ ಪಡ್ತಾ ಇದ್ದಾರೆ. ಅವರಿಗೆ ಗೊತ್ತಿಲ್ಲ ವಾಕ್ಯ ತಯಾರು ಆಗಿದೆ ಅರ್ಥವಿರುವ ಪದಗಳನ್ನು ಜೋಡಿಸಿ ಆಗಿದೆ ಇವರು ಹಾಡುವುದಷ್ಟೇ ಕೆಲಸ. ಇಲ್ಲವಾದರೆ ಆ ಪದಗಳು ಮೌಲ್ಯಗಳನ್ನು ಕಳೆದುಕೊಳ್ಳುತ್ತವೆ ನಿನ್ನಿಂದಾಗಿ ಪದಗಳು ಮೌಲ್ಯಗಳು ಕಳೆದುಕೊಂಡರೆ ಅದು ನಿನ್ನ ತಪ್ಪು ತಾನೇ ಅರ್ಥವಾಯಿತಲ್ವಾ. ಕೆಲವೊಂದು ಕಡೆ ನಿನ್ನ ಕೆಲಸ ತುಂಬಾ ಸುಲಲಿತವಾಗಿರುತ್ತೆ ಅದಕ್ಕೆ ಶ್ರಮವಹಿಸಿ ದುಡಿದರೆ ಹಾಡಿದವನು ಜಗದ್ವಿಖ್ಯಾತನಾಗುತ್ತಾನೆ. ಹಾಗೆ ನೀನು ಕೆಲಸವನ್ನು ನಿರ್ವಹಿಸಿದಾಗ ನೀನು ಪ್ರಸಿದ್ಧನಾಗುತ್ತಿ ನೆನಪಿಟ್ಟುಕೋ, ನಿನ್ನ ಕೆಲಸ ತುಂಬಾ ಸುಲಭ.

ಆ ದಿನ ಸಂಜೆ ಚಹಾ ಕುಡಿಯುವಾಗ ಹೋಟೆಲ್ನಲ್ಲಿ ಕುಳಿತ ಗ್ರಾಹಕನೊಬ್ಬ ತನ್ನ ಫೋನಿನಲ್ಲಿ ಮಾತನಾಡುತ್ತಿದ್ದ. ಆ ಪದಗಳನ್ನು ಜೋಡಿಸಿ ನಿಮ್ಮ ಮುಂದೆ ಇಟ್ಟಿದ್ದೇನೆ ನನಗೇನೋ ಇದರಲ್ಲಿ ತುಂಬಾ ಗೂಡಾರ್ಥ ಇದೆ ಅನ್ನಿಸ್ತು ನಿಮಗೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ