ಸ್ಟೇಟಸ್ ಕತೆಗಳು (ಭಾಗ ೧೧೭೯) - ನಿಲ್ದಾಣ

ಸ್ಟೇಟಸ್ ಕತೆಗಳು (ಭಾಗ ೧೧೭೯) - ನಿಲ್ದಾಣ

ನೀನ್ಯಾಕೆ ಇನ್ನು ಅಲ್ಲಿ ನಿಂತಿದ್ದೀಯಾ? ನಿನ್ನ ಜೀವನ ಅದೇ ಸ್ಥಳದಲ್ಲಿ ಸ್ಥಿರವಾಗಿರಬೇಕು ಅಂತ ಏನಾದರೂ ಯೋಚಿಸ್ತಾ ಇದ್ದೀಯಾ? ಅಥವಾ ನಿನಗೆ ಬದುಕುವುದಕ್ಕೆ ಸ್ಥಳಾವಕಾಶ ಕೊಟ್ಟವರು ನಿನ್ನಿಂದಲೇ ಜೀವನವನ್ನ ರೂಪಿಸಿಕೊಳ್ಳುತ್ತಾರೆ ಅಂತ ಅಂದುಕೊಂಡಿದ್ದೀಯಾ? ಇಲ್ಲ ಮಾರಾಯ. ಅದ್ಯಾವುದೂ ಸತ್ಯವಲ್ಲ ನೀನೀಗ ಇಳಿದ ನಿಲ್ದಾಣವನ್ನು ನಿನ್ನ ಅಂತಿಮ ಅಂದುಕೊಳ್ಳಬೇಡ.  ಸಾಗುವ ದೂರ ತುಂಬಾ ಇದೆ. ಪ್ರತಿ ನಿಲ್ದಾಣದಲ್ಲೂ ಹೊಸ ಹೊಸ ಅನುಭವಗಳಾಗುತ್ತದೆ. ನಿನಗೆ ಅಲ್ಲಿ ಬದುಕುವುದಕ್ಕೆ ಅಗತ್ಯವಾದದ್ದು ಎಲ್ಲವೂ ಸಿಗುತ್ತಿರಬಹುದು, ಆದರೆ ಅದಕ್ಕಿಂತಲೂ ಅದ್ಭುತವಾದದ್ದು, ಬೇರೆ ನಿಲ್ದಾಣಕ್ಕೆ ತುಂಬಾ ಅಗತ್ಯವಾಗಿರುವುದು ನಿನ್ನ ಬಳಿಯೂ ಇರಬಹುದು. ಹಾಗಾಗಿ ಪ್ರತಿ ನಿಲ್ದಾಣಗಳಲ್ಲಿ ಹೊಸತನ್ನ ಪಡೆದುಕೊಂಡು ಮುಂದುವರೆದು ಬಿಡು. ಕೊನೆಗೊಂದು ದಿನ ನಿನ್ನದೇ ನಿಲ್ದಾಣ ಕಟ್ಟೋಕೆ ಆಗದೆ ಇರೋ ಹಾಗೆ ಬದುಕಬೇಡ. ಶಕ್ತಿ ನಿನ್ನಲ್ಲಿದ್ದರೂ ಪರಿಸ್ಥಿತಿಗಳಿಗೆ ಹೊಸ ಊರಿನ ಪರಿಚಯವಾಗುತ್ತದೆ. ಹೀಗಂದವರು  ನನಗೆ ಕೆಲವೊಂದು ನಿಲ್ದಾಣಗಳನ್ನು ತೋರಿಸಿದ ನಮ್ಮ ಶಾಲೆಯ ಕನ್ನಡ ಮೇಷ್ಟ್ರು. ಅವರ ಮಾತು ಅರ್ಥವಾಯಿತು. ನನಗೆ ಇದನ್ನ ನಿಮಗೂ ದಾಟಿಸಬೇಕು ಅನ್ನುಸ್ತು ಹಾಗಾಗಿ ದಾಟಿಸುತ್ತೇನೆ... ಅಲ್ವಾ ನಿಲ್ದಾಣಗಳು ಹೊಸದಾದಷ್ಟು ನಾವು ವಿನೂತನವಾಗ್ತೇವೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ