ಸ್ಟೇಟಸ್ ಕತೆಗಳು (ಭಾಗ ೧೧೮೧) - ಕಾಲಚಕ್ರ
ಕಾಲ ಗರ್ಭದಲ್ಲಿ ಎಲ್ಲವೂ ಮಾಯವಾಗುತ್ತವೆ. ಏಕೆ ಯೋಚಿಸುತ್ತಿದೆ ಈ ಭೂಮಿಯಲ್ಲಿ ಒಂದಷ್ಟು ಶತಮಾನಗಳು ಕಳೆದ ಮೇಲೆ ಹಲವಾರು ರಾಜವಂಶಗಳು ಬಂದವು ಕಟ್ಟಡಗಳು ನಿರ್ಮಾಣವಾದವು ಕಾಲಕ್ರಮೇಣ ಕೆಲವೊಂದು ನಾಶವಾಯಿತು ಭೂಮಿಯೊಳಗೆ ಅಂತರ್ಗತವಾಯಿತು, ನೀರಿನೊಳಗೆ ಮುಳುಗಿ ಹೋಯಿತು, ಕೆಲವೊಂದು ಇನ್ನೂ ಕೂಡ ಪ್ರವಾಸಿ ತಾಣವಾಗಿ ಉಳಿದು ಹೋಯಿತು. ಎಲ್ಲರ ಮನಸ್ಥಿತಿ ಕಾಲಕಾಲಕ್ಕೆ ಏನಾಗಬೇಕೋ ಅದು ಆಗಿ ಮುಂದುವರೆಯುತ್ತಿದೆ .ಕೆಲವನ್ನು ಜನ ಒಪ್ಪಿ ಆಧರಿಸಿ ಉಳಿಸಿಕೊಂಡಿದ್ದಾರೆ ಕೆಲವನ್ನ ಬೇಡವೆಂದು ಕೆಡವಿದ್ದಾರೆ ಇಲ್ಲಿ ಎಲ್ಲವೂ ನೆನಪಿನಲ್ಲಿ ಮಾತ್ರ ಸಾಗುತ್ತಿರುತ್ತದೆ. ನಿನ್ನ ಬದುಕು ಹಾಗೆ ಮಾರಾಯ ಪ್ರತಿಯೊಂದು ಕಾಲದ ಮಿತಿಯೊಳಗೆ ದಾಟಿ ಹೋಗುತ್ತವೆ ಈ ಕ್ಷಣ ಇದೆಯಲ್ಲ ಮುಂದಿನ ಹೊತ್ತಲ್ಲಿ ಬದಲಾಗಿಬಿಡುತ್ತದೆ ಸಂಭ್ರಮವನ್ನು ಖುಷಿಯಿಂದ ಅನುಭವಿಸಿ ಹೊರಟುಬಿಡು ಅದರಲ್ಲಿ ಜೋತು ಬೀಳಬೇಡ. ನೋವಾದರೂ ಕೂಡ ಒಂದು ಕ್ಷಣ ಕಣ್ಣೀರಿಳಿಸಿ ಒರೆಸಿಕೊಂಡು ಮುಂದೆ ಹೆಜ್ಜೆ ಇಡು. ಅದು ಕೂಡ ಬದಲಾಗುತ್ತೆ .ಯಾವುದೂ ನಿಂತ ನೀರಲ್ಲ. ಚಲಿಸ್ತಾನೆ ಇರುತ್ತದೆ. ಮುಂದುವರಿ ನೀನು ಹೀಗೆ ಕೂತುಬಿಟ್ಟರೆ ಉಳಿದವರ ಗತಿ ಏನು? ಹೀಗೆ ಸುಮ್ಮನೆ ನೋವಿನಿಂದ ಕುಳಿತ ನನ್ನ ಬೆನ್ನು ತಟ್ಟಿ ಎಬ್ಬಿಸಿದವರು ನನ್ನ ಪ್ರೀತಿಯ ನಾಗರಾಜ್ ಸರ್. ಅವರಿಗೆ ನನ್ನನ್ನು ನೋಡಿಯೇ ನನ್ನೊಳಗಿನ ಭಾವನೆ ಅರ್ಥವಾಗಿರಬೇಕು. ಒಂದಷ್ಟು ಧೈರ್ಯ ತುಂಬಿದರು. ನಾನು ಹೆಜ್ಜೆ ಇಟ್ಟೆ. ಹೇಳುವವರು ಸಿಗದಿದ್ರೆ ನಿಮ್ಮೊಳಗೆ ವಿಚಾರವನ್ನು ತಂದುಕೊಂಡು ಮುಂದುವರೆದು ಬಿಡಿ. ಬದುಕು ನಮ್ಮದು ನಾವೇ ಬದುಕಬೇಕು.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ