ಸ್ಟೇಟಸ್ ಕತೆಗಳು (ಭಾಗ ೧೧೮೩) - ವಾರಂಟಿ

ಸ್ಟೇಟಸ್ ಕತೆಗಳು (ಭಾಗ ೧೧೮೩) - ವಾರಂಟಿ

ಗ್ಯಾರಂಟಿ ಕೊಡಿಸ್ವಮಿ, ವಾರಂಟಿ ಕೊಡಿ, ನಾವು ನಮಗೆ ಅಗತ್ಯವಾಗಿರುವುದನ್ನ ಅಂಗಡಿಯಿಂದ ತೆಗೆದುಕೊಳ್ಳುವಾಗ ಅದಕ್ಕೆ ಎಷ್ಟು ದಿನ ವಾರೆಂಟಿ ಕೇಳುತ್ತೇವೆ, ಬಾಳ್ವಿಕೆ ಬರುವುದನ್ನ ಖಾತ್ರಿಪಡಿಸಿಕೊಂಡೇ ಖರೀದಿಸುತ್ತೇವೆ. ತುಂಬಾ ಬೆಳೆಬಾಳುವುದಾದರೆ ಅದರ ಕಡೆಗೆ ಹೆಚ್ಚಿನ ಗಮನ ಹರಿಸ್ತೇವೆ. ಹೀಗಿರುವಾಗ ನೀವು ನಮ್ಮ ಅಗತ್ಯಕ್ಕೆ ನಮ್ಮದೇ ಹಣವನ್ನ ಕೋಟಿಗಟ್ಟಲೆ ಪಡೆದುಕೊಂಡು ನಿರ್ಮಿಸಿರುವ ಕಟ್ಟಡಗಳಿಗೆ ರಸ್ತೆಗಳಿಗೆ ನಿರ್ದಿಷ್ಟ ಬಾಳ್ವಿಕೆಯ ಅವಧಿಯನ್ನು ಕೊಡುವುದಿಲ್ಲ ಯಾಕೆ? ನಾನಿದನ್ನ ಒಪ್ಪಿಕೊಳ್ಳುವುದಿಲ್ಲ ನೀವು ಮಾಡುವ ಕೆಲಸದ ಮೇಲೆ ನಿಮಗೆ ನಂಬಿಕೆ ಇದ್ದರೆ ಇಂತಿಷ್ಟು ವರ್ಷಗಳ ಬಾಳ್ವಿಕೆಯ ಅವಧಿಯನ್ನು ನೀಡಿ ಅದರ ಮಧ್ಯದಲ್ಲಿ ಏನಾದರೂ ತೊಂದರೆಯಾದರೆ ನೀವೇ ಬಂದು ಸ್ವತಃ ಸರಿ ಪಡಿಸುವುದನ್ನು ಖಾತ್ರಿಪಡಿಸಿಕೊಳ್ಳಿ ಈ ನಿಯಮವನ್ನು ನೀವು ಕಡ್ಡಾಯವಾಗಿ ತರಲೇಬೇಕು ನನ್ನ ಹಣ ವ್ಯರ್ಥವಾಗುವುದ್ದಕೆ ನಾನು ಬಿಡುವುದಿಲ್ಲ  ಹೀಗೆಂದು ಜೋರು ಜೋರಾಗಿ ನಾಲ್ಕು ರಸ್ತೆ ಸೇರುವಲ್ಲಿ ತುಂಬಾ ನೋವಿನಿಂದ ಹೇಳುತ್ತಿದ್ದವರು ಮಹೇಶ್ ಜಿ. ಇತ್ತೀಚಿಗಷ್ಟೇ ರಸ್ತೆಯ ಗುಂಡಿಗಳಿಗೆ ಬಿದ್ದು ಕಾಲನ್ನು ಕಳೆದುಕೊಂಡ ಮಗ ಅನುಭವಿಸಿದ ನೋವಿನ ವ್ಯಥೆಯನ್ನ ಮನಸ್ಸಲ್ಲಿ‌ ಅದುಮಿ‌ ಹಿಡಿದು  ಮಾತನ್ನ ಆಡುತ್ತಿದ್ದಾರೆ... ಆದರೆ ಕೇಳುವವರಿಲ್ಲ.