ಸ್ಟೇಟಸ್ ಕತೆಗಳು (ಭಾಗ ೧೧೮೪) - ದೊಡ್ಡವರು

ಸ್ಟೇಟಸ್ ಕತೆಗಳು (ಭಾಗ ೧೧೮೪) - ದೊಡ್ಡವರು

ಸ್ವ ಪ್ರತಿಷ್ಠೆ ಅಹಂಕಾರ ಇಬ್ಬರಲ್ಲೂ ತುಂಬಾ ಜೋರಾಗಿತ್ತು. ಅದೊಂದು ಪುಟ್ಟ ಕಾರ್ಯಕ್ರಮ ಇಬ್ಬರೂ ದೊಡ್ಡ ಪದವಿಯಲ್ಲಿ ಇರುವವರು. ತಮ್ಮ ಬಗ್ಗೆ ಅವರು ಕೆಟ್ಟದ್ದು ಮಾತನಾಡಿದ್ದಾರೆ ಅನ್ನುವ ಸುದ್ದಿ ಸಿಕ್ಕು ಇವರು ಅದಕ್ಕೆ ಉಗ್ರ ಹೋರಾಟವನ್ನೇ ಕೈಗೆತ್ತಿಕೊಂಡರು. ಕಾನೂನನ್ನ ತಮಗಿಷ್ಟ ಬಂದಂತೆ ಬಳಸಿ ಅವರನ್ನ ಬಂಧಿಸಿ ಒಂದು ಹಂತದ ಮೇಲುಗೈಯನ್ನು ಸಾಧಿಸಿದರು. ಆ ಬಂಧನದ ಒಂದಷ್ಟು ನಾಟಕಗಳು ಮುಂದುವರಿದು ಪರದೆ ಬಿದ್ದು ಬಂಧನ ಹೊಂದಿದ ವ್ಯಕ್ತಿ ಬಿಡುಗಡೆಯಾದರು. ಬಿಡುಗಡೆಯಾದ ವ್ಯಕ್ತಿ ತನ್ನ ತಪ್ಪಿಲ್ಲದನ್ನು ವಾದಿಸುತ್ತಾ ಅದಕ್ಕೆ ಬೇಕಾದ ಪುರಾವೆಗಳನ್ನು ನೀಡಿದರು. ಒಬ್ಬರ ಮೇಲೊಬ್ಬರು ಅಪವಾದಗಳನ್ನು ಹೊತ್ತು ಹಾಕುತ್ತಾ ತಾವು ಸಭ್ಯಸ್ಥರೆನ್ನುವುದಕ್ಕೆ ಸಾಕ್ಷಿಗಳನ್ನು ನೀಡಿದರು ಇಬ್ಬರ ಜಗಳವನ್ನ ಹದ್ದು ಬಸ್ತಿನಲ್ಲಿ ಇಡುವುದಕ್ಕೆ ದೊಡ್ಡವರು ನ್ಯಾಯಮಂಡಳಿಯನ್ನು ತೀರ್ಮಾನಿಸಲು ತಿಳಿಸಲಾಯಿತು. ನ್ಯಾಯವು ಸರಿಯಾದ ದಾರಿಯಲ್ಲಿ ಸಾಗಬೇಕು ಎನ್ನುವ ಕಾರಣಕ್ಕೆ ಹೇಳಿದ ಕೆಲಸವನ್ನ ಅಚ್ಚುಕಟ್ಟಾಗಿ ಪಾಲಿಸಿದ ಕಾರಣಕ್ಕೆ ಪುಟ್ಟ ಸಂಸ್ಥೆಯ ಮುಖ್ಯಸ್ಥನನ್ನ ಕೆಲಸದಿಂದಲೇ ವಜಾ ಮಾಡಿದರು. ಆತ ಮನೆಯಲ್ಲಿ ಕಣ್ಣೀರಿಡುತ್ತಿದ್ದಾನೆ ಹೇಳಿದ್ದನ್ನ ಮಾಡಿದರೂ ಸಮಸ್ಯೆ, ಹೇಳಿದ್ದನ್ನ ಮಾಡದೆ ಇದ್ದರೂ ಸಮಸ್ಯೆ. ಒಟ್ಟಿನಲ್ಲಿ ದೊಡ್ಡವರು ತಪ್ಪಿಸಿಕೊಳ್ಳುವುದಕ್ಕೆ ಬಡವರು ಬಲಿಪಶು ಆಗಲೇಬೇಕು. ಓದು ವಿದ್ಯೆ ನೀಡುತ್ತದೆ ಹಾಗಾಗಿ ಹೊಸ ದಾರಿಯ ಕಡೆಗೆ ಸಾಗಬೇಕಾಗಿದೆ. ಬಲಿಪಶುವಾದವನನ್ನ ಕೇಳುವವರಿಲ್ಲ... ಊರಲ್ಲಾದ ಅತ್ಯಾಚಾರ, ನೋವಿನ ಕಣ್ಣೀರು ಇವರ್ಯಾರಿಗೂ ಕಾಣಲೇ‌ ಇಲ್ಲ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ