ಸ್ಟೇಟಸ್ ಕತೆಗಳು (ಭಾಗ ೧೧೯೩) - ಬಾಗಿಲು

ಸ್ಟೇಟಸ್ ಕತೆಗಳು (ಭಾಗ ೧೧೯೩) - ಬಾಗಿಲು

ಅವನು ಬಾಗಿಲ ಮುಂದೆ ನಿಂತಿದ್ದಾನೆ. ಹಲವು ಸಮಯದಿಂದ ಅಳುತ್ತಲೇ ಇದ್ದಾನೆ. ಯಾರಾದರೂ ಬಾಗಿಲು ತೆಗೆಯಿರಿ ಎಂದು ಯಾಚಿಸುತ್ತಿದ್ದಾನೆ. ಸುತ್ತ ಯಾರೂ ಇಲ್ಲ, ಬಾಗಿಲು ತೆಗೆಯುವವರು. ತನ್ನ ದೀನ ಪರಿಸ್ಥಿತಿಯನ್ನು ಕಂಡು ಮರುಗಿದ್ದಾನೆ. ತನಗಾಗಿರುವ ಸ್ಥಿತಿ ಕಂಡು ಕಣ್ಣೀರು ಇಳಿಸಿದ್ದಾನೆ. ತನಗೂ ಜೊತೆಗೆ ನಿಂತ ಎಲ್ಲರಿಗೂ ಶಪಿಸುತ್ತಲೇ ಹೊರಟು ವಾಪಾಸು ತಿರುಗಿ ಬಂದವನಿದ್ದಾನೆ. ತದ ನಂತರ ತಲುಪಿದವನು ಆ ಬಾಗಿಲನ್ನು ಒಂದಷ್ಟು ಕಷ್ಟಪಟ್ಟು ತಳ್ಳಿದ ಕಾರಣ ಅದು ತೆರೆದುಕೊಂಡಿತು. ಒಳಗೆ ಅಡಿಯಿಟ್ಟು ಮುಂದುವರೆದ. ಎಲ್ಲಾ ಬಾಗಿಲುಗಳಿಗೆ ಬೀಗ ಹಾಕಿರುವುದಿಲ್ಲ. ನಾವು ಸ್ವಲ್ಪ ಪ್ರಯತ್ನ ಪಟ್ಟರೆ ತೆರೆದುಕೊಳ್ಳುತ್ತದೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ