ಸ್ಟೇಟಸ್ ಕತೆಗಳು (ಭಾಗ ೧೧೯೭) - ದೇವರಾಗಬೇಕು
![](https://saaranga-aws.s3.ap-south-1.amazonaws.com/s3fs-public/styles/article-landing/public/god.jpeg?itok=huXPN7zC)
ಅವಳಿಗೆ ಅನ್ನಿಸಿತಂತೆ ತಾನಿಂದು ದೇವರಾಗಿದ್ದು ಬಿಡಬೇಕಿತ್ತು ಅಥವ ಅದ್ಭುತ ಶಕ್ತಿ ತನ್ನೊಳಗೆ ಸಂಚಯವಾಗಬೇಕು ಅಂತ. ಆ ದಿನ ಬಸ್ಸಿನಲ್ಲಿ ಒಬ್ಬಳು ಕಿಟಕಿ ಬದಿಗೆ ಕುಳಿತ ಹುಡುಗಿಗೆ ಪಕ್ಕದಲ್ಲಿ ಕುಳಿತವ ಮೈ ಮೇಲೆ ಒರಗಿ ಅಸಹ್ಯವಾಗಿ ವರ್ತಿಸುತ್ತಿದ್ದ. ಕೇಳಿದರೆ ಬಸ್ ತುಂಬಿದೆ ಏನೂ ಮಾಡೋದ್ದಕ್ಕೆ ಆಗೋದಿಲ್ಲ ಎನ್ನುತ್ತಿದ್ದ. ಸುತ್ತ ಇದ್ದ ಯಾರೂ ಪ್ರಶ್ನಿಸದೇ ಇದ್ದಾಗ ತನ್ನೊಳಗೆ ಶಕ್ತಿ ಇದ್ದು ಅವನನ್ನು ಶಿಕ್ಷಿಸಬೇಕು ಅನ್ನಿಸುತ್ತಿತ್ತು. ತನ್ನಿಂದ ಪರಿಹಾರ ಮಾಡಲಾಗದ ಮನೆಯ ಸಮಸ್ಯೆಗೆ ಪರಿಹಾರ ದೊರೆಯಲು ದೇವರಾಗಬೇಕು ಅನ್ನಿಸುತ್ತಿತ್ತು. ಒಟ್ಟಿನಲ್ಲಿ ಅದ್ಭುತವೊಂದು ಘಟಿಸಿ ಕಣ್ಣೀರು ಒರೆಸುವ ಕೆಲಸವಾಗಬೇಕು ಅಂತ ಅಂದುಕೊಳ್ಳುತ್ತಾಳೆ. ಮತ್ತೆ ಮೊದಲಿನಂತೆ ಕೆಲಸದ ಕಡೆಗೆ ಹೊರಡುತ್ತಾಳೆ. ಅವಳು ಅಂದುಕೊಳ್ಳುತ್ತಲೇ ಇದ್ದಾಳೆ ಇನ್ನೂ ಕೂಡಾ…
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ