ಸ್ಟೇಟಸ್ ಕತೆಗಳು (ಭಾಗ ೧೧೯೮) - ಮರ ಮಾತು

ಸ್ಟೇಟಸ್ ಕತೆಗಳು (ಭಾಗ ೧೧೯೮) - ಮರ ಮಾತು

ಅಲ್ಲೋ ಮಾರಾಯ ನೀನು ಹೇಗೆ ನಿಂತು ಬಿಟ್ಟಿದ್ದೀಯಾ? ಇಷ್ಟು ಗಟ್ಟಿಯಾಗಿ, ಇನ್ನೂ ಬೀಳದೆ.‌ ನಿನ್ನೆ ರಾತ್ರಿಯ ಆ ಜೋರು ಮಳೆಗೆ, ಬಿರುಸಾದ ಗಾಳಿಗೆ ಒಂದೂ ಚೂರು ಅಲುಗಾಡದೆ ಹೇಗೆ ನಿಂತು ಬಿಟ್ಟಿದ್ದೀಯಾ? ಅಲ್ಲೋ ಮಾರಾಯಾ ನಿನ್ನ ಸುತ್ತ ಮುತ್ತ ನಿಂತಿದ್ದವರು ಯಾರೂ ನಿಂತೇ‌ ಇಲ್ಲ. ಎಲ್ಲರೂ‌ ತಲೆ‌ಕೆಳಗಾಗಿ ಉರುಳಿದ್ದಾರೆ. ಇದು‌ ಹೇಗೆ ಸಾಧ್ಯವಾಯಿತು? ನೋಡು, ಅವರೆಲ್ಲ ಬೇರನ್ನ ಆಳಕ್ಕಿಳಿಸಿದವರಲ್ಲ. ಮೇಲೆ ಸಿಕ್ಕಿದ್ದನ್ನ ಪಡೆದುಕೊಂಡು ಆರಾಮವಾಗಿ ಬದುಕಿದವರು. ಬೇರಿಳಿಸುವ ಕಷ್ಟ ಪಟ್ವವರಲ್ಲ.

ಆದರೆ ನಾನು ನೀರು, ಗಾಳಿ, ಪೌಷ್ಟಿಕಾಹಾರವನ್ನು ಹುಡುಕುತ್ತಾ ಬೇರುಗಳನ್ನ ಇನ್ನೂ ಆಳಕ್ಕೆ ಕಳುಹಿಸಿದವ. ಅದಕ್ಕೆ ಇನ್ನೂ ನಿಂತಿದ್ದೇನೆ.  ಅರ್ಥವಾಯಿತು ತಾನೆ. ಆಳಕ್ಕಿಳಿದಷ್ಟು ಗಟ್ಟಿಯಾಗುತ್ತೀಯಾ? ಹೆಚ್ಚು ಪರಿಶ್ರಮ ಪಟ್ಟಾಗ ಹೆಚ್ಚು ಸಮಯ ಉಳಿಯಬಹುದು. ತಿಳಿಯಿತಾ?

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ