ಸ್ಟೇಟಸ್ ಕತೆಗಳು (ಭಾಗ ೧೨೦೧) - ಸ್ಸಾಭಿಮಾನ

ಸ್ಟೇಟಸ್ ಕತೆಗಳು (ಭಾಗ ೧೨೦೧) - ಸ್ಸಾಭಿಮಾನ

ನಾಲ್ಕು ರಸ್ತೆಗಳು ಅಲ್ಲಿ ಕೂಡುತ್ತವೆ. ಐದು ನಿಮಿಷಕ್ಕೊಮ್ಮೆ ವಾಹನಗಳನ್ನು ನಿಲ್ಲಿಸಿ ಒಂದೊಂದು ರಸ್ತೆಯ ವಾಹನಗಳನ್ನ ಮುಂದೆ ಕಳುಹಿಸುತ್ತಾರೆ. ಇದು ಪ್ರತಿದಿನ ನಡೆಯುವ ದಿನಚರಿ. ಅವತ್ತು ಆ ನಾಲ್ಕು ರಸ್ತೆ ಸೇರುವಲ್ಲಿ ದೇಹದಲ್ಲಿ ಶಕ್ತಿ ಇಲ್ಲದ ಒಬ್ಬ ಎಲ್ಲ ಗಾಡಿಯ ಮುಂದೆ ನಿಂತು ಕೈಚಾಚಿ ಬೇಡುತ್ತಿದ್ದಾನೆ. ಏನಾದರೂ ನೀಡಿ ಎಂದು ಅವರಲ್ಲಿ ವಿನಂತಿಸಿಕೊಳ್ಳುತ್ತಿದ್ದಾನೆ. ನೀಡದೆ ಹೋದಾಗ ಅವರ ಮೇಲೆ ಸಿಟ್ಟು ತಾಳಿಕೊಂಡು ಮುಂದೆ ಹೆಜ್ಜೆ ಇಡುತ್ತಾನೆ ಎಲ್ಲಾ ಗಾಡಿಗಳನ್ನು ದಾಟಿ ಮೂಲೆಗೆ ತಲುಪಿ ಸಂಗ್ರಹವಾದ ಹಣವನ್ನ ಲೆಕ್ಕ ಹಾಕಿ ಕೆಲವೊಮ್ಮೆ ಸಂತಸಪಟ್ಟು ಕೆಲವೊಮ್ಮೆ ನೋವಿನಿಂದ ಅದನ್ನು ತನ್ನ ಬ್ಯಾಗಿಗೆ ತುಂಬಿಸಿಕೊಂಡು ಮತ್ತೆ ಅದೇ ಕೆಲಸಕ್ಕೆ ಕೈ ಹಾಕುತ್ತಾನೆ. ಅದೇ ನಾಲ್ಕು ರಸ್ತೆ ಸೇರುವಲ್ಲಿ ಕಾಲಿಲ್ಲದ ಒಬ್ಬ ವ್ಯಕ್ತಿ ಗಾಡಿ ಒರೆಸುವ ಬಟ್ಟೆಗಳನ್ನ ಮಾರುತ್ತಿದ್ದಾನೆ, ಕಣ್ಣು ಕಾಣದ ಭಿಕ್ಷುಕನೊಬ್ಬ ತನ್ನ ಮುಂದೆ ಪೆನ್ನುಗಳನ್ನು ಇಟ್ಟುಕೊಂಡು ಖರೀದಿಸಿ ಎಂದು ಕೇಳುತ್ತಿದ್ದಾನೆ. ಅವರಿಗೆ ಜೀವನದ ಬಗ್ಗೆ ಅದ್ಭುತ ಕನಸುಗಳೇನು ಇಲ್ಲ . ಆದರೆ ಸ್ವಾಭಿಮಾನದ ಬದುಕೊಂದನ್ನು ಕಟ್ಟುವ ಆಸೆಯವರದ್ದು. ಎಲ್ಲರದ್ದು ಬದುಕುವ ದಾರಿ. ಆ ಕೂಡುವ ರಸ್ತೆಗಳು ಒಬ್ಬೊಬ್ಬರ ಆಲೋಚನೆಯನ್ನ ಒಂದೊಂದು ದಿಕ್ಕಿಗೆ ಕೊಂಡೊಯ್ಯುತ್ತದೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ