ಸ್ಟೇಟಸ್ ಕತೆಗಳು (ಭಾಗ ೧೨೦೨) - ಹಗ್ಗ

ಸ್ಟೇಟಸ್ ಕತೆಗಳು (ಭಾಗ ೧೨೦೨) - ಹಗ್ಗ

ದೊಡ್ಡ ಮೈದಾನ ಜನ‌ ಸೇರಿದ್ದಾರೆ. ಉತ್ಸವವೊಂದು ಅದ್ಭುತವಾಗಿ ಸಂಯೋಜನೆಗೊಂಡಿದೆ. ಊರವರೆಲ್ಲಾ ಸಮಯ ಸಾಗಿಸುವುದಕ್ಕೆ ಅಲ್ಲಲ್ಲಿ ಓಡಾಡುತ್ತಿದ್ದಾರೆ.  ಅಲ್ಲೊಂದು‌ ಕಡೆ  ಹಗ್ಗದ ಮೇಲಿನ ನಡಿಗೆ ಭರದಿಂದ ಸಾಗುತ್ತಿದೆ. ಹೊಟ್ಟೆ ಹೊರೆಯಲು ಮನೆಯ ಮಗಳು ಹಗ್ಗದ ಮೇಲೆ ಬದುಕಿನ ನಡಿಗೆ ನಡೆಸುತ್ತಿದ್ದಾಳೆ. ಆಯ ತಪ್ಪಿದರೆ ಮರಳ ಮೇಲೆ‌ ಬಿದ್ದು ಮರಳಿ ಏರಲಾಗದ ಸ್ಥಿತಿ ತಲುಪುತ್ತಾಳೆ.  ಇಲ್ಲಿ ನೋಡುಗರು ಅಸ್ವಾದಿಸುತ್ತಾರೆ. ಮನಸ್ಸಿಗೆ ಇಷ್ಟವಾದರೆ ಒಂದಷ್ಟು ಕಾಸನ್ನು ಅಲ್ಲೇ ನೀಡಿ ಹೊರಟು ಹೋಗುತ್ತಾರೆ. ಹಗ್ಗದ ಮೇಲಿನ‌ ನಡಿಗೆ ನೋಡಿ ಒಂದಷ್ಟು ಹಣ ಸಂಗ್ರವಾಗುತ್ತಿದೆ. ಅಲ್ಲೇ‌ ಇನ್ನೊಂದು‌ ಮೂಲೆಯಲ್ಲಿ ಜನರೇ ಹಣ ನೀಡಿ ಹಗ್ಗ ಜೊತೆಗೆ ಮೇಲೆ‌ ಹಾರುತ್ತಾರೆ ಇಳಿಯುತ್ತಾರೆ . ಇದು ಸಂಭ್ರಮದ ಹಗ್ಗದ ಜೊತೆಗಿನ ಹಾರಾಟ. ಹಗ್ಗವೆರಡೂ ಕಡೆ ಇದೆ. ಒಂದು ಸಂಭ್ರಮಕ್ಕಾದರೆ ಇನ್ನೊಂದು ನೋವಿಗೆ. ಬದುಕಿನ ಆಸರೆಗೆ, ಬದುಕಿನ ವಿಲಾಸಕ್ಕೆ...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ