ಸ್ಟೇಟಸ್ ಕತೆಗಳು (ಭಾಗ ೧೨೦೩) - ಗೂಗಲ್ ಮ್ಯಾಪ್

ಸ್ಟೇಟಸ್ ಕತೆಗಳು (ಭಾಗ ೧೨೦೩) - ಗೂಗಲ್ ಮ್ಯಾಪ್

ನನ್ನ ಮೊಬೈಲ್ ಗೊಂದು ಗೂಗಲ್ ಮ್ಯಾಪ್ ಹಾಕಿಸಿ ಕೊಡಿ. ಎಲ್ಲರ ಮೊಬೈಲ್ ನಲ್ಲಿ ಇರುವಂತಹದ್ದೇ google ಮ್ಯಾಪ್ ನನಗೆ ಬೇಡ. ಯಾಕೆಂದರೆ ಅದು ನಾವು ಎಲ್ಲಿಗೆ ತಲುಪಬೇಕು ಅನ್ನೋದನ್ನ ಹಾಕುತ್ತೇವೋ ಆ ದಾರಿಯನ್ನು ಖಂಡಿತವಾಗಿಯೂ ತೋರಿಸುತ್ತದೆ. ನಾನು ಸತ್ಯದ ದಾರಿಯಲ್ಲಿ ಸಾಗುತ್ತಿದ್ದೇನಾ? ಪ್ರಾಮಾಣಿಕವಾಗಿದ್ದೇನಾ? ಈ ವೇಗದಲ್ಲಿ ಹೋದ್ರೆ ಖಂಡಿತವಾಗಿಯೂ ಗುರಿ ತಲುಪುತ್ತೇನಾ? ಎಲ್ಲಾದರೂ ತಿರುವುಗಳಿವೆಯಾ? ಯಾವ ರೀತಿಯ ಅಪಾಯಗಳು ಮುಂದೆ ಎದುರಾಗಬಹುದು? ಅವಘಡಗಳಾಗುವ ಸೂಚನೆ ಏನಾದರೂ ಇದೆಯಾ ? ನಾನೀಗ ಹೋಗುತ್ತಿರುವ ವಾಹನ ಸರಿಯಾಗಿ ನನ್ನನ್ನು ಗುರಿ ತಲುಪಿಸುತ್ತಾ? ಎಲ್ಲಾ ಮಾಹಿತಿಯನ್ನು ಸರಿಯಾಗಿ ನಿಖರವಾಗಿ ನೀಡುವ ಗೂಗಲ್ ಮ್ಯಾಪ್ ಒಂದರ ಅವಶ್ಯಕತೆ ನನಗಿದೆ. ಬದುಕಿನ ಅತ್ಯಂತ ಉನ್ನತ ತುದಿಯಾದ ಭಗವಂತನ ಬಳಿಗೆ ತಲುಪುವುದಕ್ಕೆ ಆತನ ಸಾಕ್ಷಾತ್ಕಾರವನ್ನು ನನ್ನ ಕೆಲಸದ ಮೂಲಕ ಪಡೆದುಕೊಳ್ಳುವುದಕ್ಕೆ ನಾನು ನನ್ನೊಳಗೆ ತುಂಬಿಸಿಕೊಂಡ ಚೈತನ್ಯವೆಂಬ ಇಂಧನ ಸಾಕಾಗಬಹುದಾ? ನಾನು ಅಲ್ಲಿಗೆ ತಲುಪುವುದಕ್ಕೆ ಅಳವಡಿಸಿಕೊಳ್ಳ ಬೇಕಾಗಿರುವುದೇನನ್ನಾ? ಇದೆಲ್ಲವನ್ನು ತಿಳಿಸುವಂತಹ ಗೂಗಲ್ ಮ್ಯಾಪ್ ನ ಅವಶ್ಯಕತೆ ನನಗಿದೆ. ಯಾಕೆಂದರೆ ನನ್ನ ಬದುಕಿನ ದಾರಿ ಸಾಗುವ ದೂರ ತುಂಬಾ ದೂರ ಇದೆ .ನಿಮ್ಮಲ್ಲಿ ಯಾರಾದ್ರೂ ಇದರ ಬಗ್ಗೆ ಮಾಹಿತಿ ನೀಡುವವರಿದ್ದರೆ ದಯವಿಟ್ಟು ತಿಳಿಸಿಕೊಡಿ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ