ಸ್ಟೇಟಸ್ ಕತೆಗಳು (ಭಾಗ ೧೨೦೭) - ದಡ್ಡತನ
![](https://saaranga-aws.s3.ap-south-1.amazonaws.com/s3fs-public/styles/article-landing/public/god_0.jpeg?itok=iPrYGrRV)
ಮೂಢರನ್ನು ಕಂಡು ದೇವರು ನಗುತ್ತಿದ್ದಾನೆ. ತಾನೇ ಸೃಷ್ಟಿಸಿದ ಮಕ್ಕಳ ಅಸಹ್ಯ ಕೆಲಸವನ್ನ ಕಂಡು ತಲೆತಗ್ಗಿಸಿದ್ದಾನೆ. ಮಕ್ಕಳೇ ನಾನು ಜಾತಿ, ಅಂತಸ್ತು ಎಲ್ಲವನ್ನು ಮೀರಿ ನಿಂತು ದೇವರಾದವ. ನಾನು ನಿಮ್ಮ ಅಹಂನ ಕೋಟೆಯೊಳಗೆ ಬಂಧಿಯಾದವನಲ್ಲ. ನೀವು ಜಾತಿಯ ಬೇಲಿ ಕಟ್ಟಿಕೊಂಡು ನಿಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮಂದಿರಗಳನ್ನ ಕಟ್ಟುತ್ತಿದ್ದೀರಾ? ನೀವು ಕಟ್ಟಿದ ಸ್ಥಳವೇ ನನ್ನ ಮೂಲಸ್ಥಾನ ಎನ್ನುತ್ತೀರಿ. ನಿಮ್ಮ ರಾಜಕೀಯದ ಅಸಹ್ಯ ಕೆಲಸದ ನಡುವೆ ನಿಜ ಭಕ್ತನಿಗೆ ನನ್ನ ಬದುಕಿನ ದಾರಿಯನ್ನ ಕಾಣುವುದ್ದಕ್ಕೆ ಸಾದ್ಯವಾಗದೆ ನೀವಂದದ್ದನ್ನೇ ಸತ್ಯ ಅಂದುಕೊಂಡಿದ್ದಾನೆ. ಎಲ್ಲರೂ ಒಂದೇ ಸುಳ್ಳನ್ನು ಹೇಳಿದಾಗ ಕೊನೆಗೆ ನಾನೇ ಸತ್ಯ ಹೇಳಿದರೂ ನೀವು ಕೇಳುವುದ್ದಕ್ಕೆ ತಯಾರಿಲ್ಕ. ಏನೆನ್ನಲಿ ನನ್ನ ಸೃಷ್ಠಿಗೆ....ಭಗವಂತ ಮೌನವಾದ, ನಮ್ಮ ದಡ್ಡತನಕ್ಕೆ ನಮಗಂತೂ ಅರ್ಥವಾಗುವುದೇ ಇಲ್ಲ ಬಿಡಿ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ