ಸ್ಟೇಟಸ್ ಕತೆಗಳು (ಭಾಗ ೧೨೦೮) - ಗೆಲುವು

ಸ್ಟೇಟಸ್ ಕತೆಗಳು (ಭಾಗ ೧೨೦೮) - ಗೆಲುವು

ಬದುಕು ನಡೆಯುತ್ತಿದೆ ದಾರಿಯಲ್ಲಿ. ಮೊಮ್ಮಗನನ್ನು ಇಂಗ್ಲೀಷ್ ಶಾಲೆಗೆ ಸೇರಿಸಲು ಅಜ್ಜನ‌ ಪಯಣ. ಮನೆಯವರಿಗೆ ಒಪ್ಪಿಗೆ‌ ಇಲ್ಲದಿದ್ದರೂ ಅಜ್ಜನಿಗೆ‌ ಒಂದೇ‌ ಹಠ. ಒಮ್ಮೆ ಪರವೂರಲ್ಲಿ ಓಡಾಡುವಾಗ ಅವರು ಮಾತಾಡಿದ ಭಾಷೆ ಅರ್ಥವಾಗದೆ ಅವರ ನಗುವಿನ‌ ಮುಂದೆ ತಲೆ‌ತಗ್ಗಿಸಿ ಹೊರಬಂದವರು. ಮೊಮ್ಮಗನ‌ ಬಾಯಲ್ಲಿ ಅಂಗ್ಲ ಭಾಷೆ ನಲಿದಾಡಬೇಕು. ಆತ ಊರ ಮಕ್ಕಳಿಗೆ ಇಂಗ್ಲೀಷ್ ಹೇಳಿ ಕೊಡಬೇಕು. ಅದೇ ಹಠದಲ್ಲಿ ಮೊಮ್ಮಗನ ಶಾಲೆಯ ಪಯಣ ಆರಂಭವಾಗಿದೆ. ಅವನಿಗೆ ಬೇಕಾದ್ದನ್ನೆಲ್ಲಾ ಕೊಡಿಸುವುದ್ದಕ್ಕೆ ಕೆಲಸಕ್ಕೂ ಸೇರಿದ್ದಾರೆ. ಮೊಮ್ಮಗನ ಶಾಲೆಗೆ ಕಳುಹಿಸಿ ಅಲ್ಲೇ ಅಂಗಡಿಯಲ್ಲಿ ಪೊಟ್ಟಣ ಕಟ್ಟುತ್ತಾರೆ, ಸಂಜೆ ಶಾಲೆ ಬಿಟ್ಟ ಕೂಡಲೇ ಮನೆಗೆ ಹೊರಡುತ್ತಾರೆ. ಊರ ಬದುಕನ್ನು ಮೊಮ್ಮಗನಿಗೆ ಪರಿಚಯಿಸಿದ್ದಾರೆ. ಅವನೊಳಗೆ ಬದುಕ ಅರ್ಥೈಸುವ ಕಲೆಯನ್ನು ದಿನವೂ ಹೇಳಿಕೊಡುತ್ತಲೇ ಇದ್ದಾರೆ..‌ ಮೊಮ್ಮಗನ ಮುಂದಿನ ಬದುಕು ನಿರ್ಧಾರ ಹೇಗೋ ಸಮಾಜ ಗೆಲ್ಲುತ್ತೊ ಅಜ್ಜನೋ ಕಾದು ನೋಡಬೇಕು.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ