ಸ್ಟೇಟಸ್ ಕತೆಗಳು (ಭಾಗ ೧೨೨೫) - ಆಕೆ

ಸ್ಟೇಟಸ್ ಕತೆಗಳು (ಭಾಗ ೧೨೨೫) - ಆಕೆ

ಅವಳು ಮರೆತಿದ್ದಾಳೆ.‌ಅಲ್ಲಾ ಮರೆತಂತೆ ನಟಿಸುತ್ತಿದ್ದಾಳೆ. ಅವಳ ಹವ್ಯಾಸವದು, ಅಕ್ಷರಗಳು ಹಾಡಿನ‌ ಸಾಲುಗಳಾಗುತ್ತಿದ್ದವು, ಮಾತುಗಳು ರಾಗಗಳನ್ನ ನುಡಿಸುತ್ತಿದ್ದವು, ಹೆಜ್ಜೆಗಳು ತಾಳಗಳನ್ನ ಅಪ್ಪಿಕೊಳ್ಳುತ್ತಿದ್ದವು, ಅವಳು ಇವೆಲ್ಲವನ್ನು ಜೀವಿಸಿದ್ದಳು ಅದರ ಜೊತೆಗೆ ಬದುಕುವ ಕನಸು‌ ಕಂಡಿದ್ದವಳು. ಆದರೆ ಕಾಲದ ಓಟದಲ್ಲಿ ಬದುಕಿನ‌ ಅನಿವಾರ್ಯತೆಯಲ್ಲಿ ಮರೆತಿದ್ದಾಳೆ. ಇಲ್ಲ ಇಲ್ಲ ಮರೆತಂತೆ ನಟಿಸುತ್ತಿದ್ದಾಳೆ. ಜೊತೆಗಿರುವ ಯಾರಿಗೂ ಆಕೆಯ ಒಳಗಿನ‌ ಭಾವದ ಅರಿವಿಲ್ಲ. ಆಕೆಯನ್ನ ಬೆನ್ನು ತಟ್ಟಿ ಪ್ರೋತ್ಸಾಹಿಸುವವರಿಲ್ಲ, ಆಕೆ ಯಾರದ್ದೋ ಸಾಧನೆಗಳನ್ನ‌ ಕಂಡಾಗ ಮೌನವಾಗುತ್ತಾಳೆ, ಪರಿಸ್ಥಿತಿಯನ್ನ ನೆನೆದು ಕುಗ್ಗುತ್ತಾಳೆ.‌ ಬದುಕಿನ‌ ಸ್ಥಿತಿಗೆ ಒಪ್ಪಿಗೆ ಸೂಚಿಸಿ ಮುನ್ನುಡಿಯಿಡುತ್ತಾಳೆ... ಆಕೆ ಇನ್ನೂ ದೊಡ್ಡವಳಾಗುತ್ತಾಳೆ ಎಲ್ಲವನ್ನೂ ತಿಳಿದಿದ್ದೂ ಏನೂ ತಿಳಿಯದಂತೆ ಸುಮ್ಮನಿರುವುದ್ದಕ್ಕೆ ಆಕೆ ದೊಡ್ಡವಳಾಗಿದ್ದಾಳೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ