ಸ್ಟೇಟಸ್ ಕತೆಗಳು (ಭಾಗ ೧೨೨೮) - ಅಸೂಯೆ

ಸ್ಟೇಟಸ್ ಕತೆಗಳು (ಭಾಗ ೧೨೨೮) - ಅಸೂಯೆ

ದಾರಿ ತಪ್ಪಿ ಬಂದ ಬೆಕ್ಕೊಂದು ನಮ್ಮ ಮನೆಯಲ್ಲಿ ಬದುಕುವುದಕ್ಕೆ ಆರಂಭ ಮಾಡಿತು. ದಿನ ಕಳೆದಂತೆ ನಮ್ಮ ಮನೆಯಲ್ಲಿ ಒಬ್ಬನಾಗಿ ಬಿಟ್ಟಿತು. ಈ ಮನೆಯಲ್ಲಿ ಅವನದು ಒಂದು ಸ್ಥಾನ ಗಟ್ಟಿಯಾಗಿ ಸ್ಥಾಪಿತವಾಗಿತ್ತು. ಹಾಗೆ ದಿನಗಳು ಕಳಿತಾ ಇದ್ದ ಹಾಗೆ ಒಂದು ದಿನ ಮನೆಯ ಸುತ್ತಮುತ್ತ ಒಂದು ಸಣ್ಣ ಬೆಕ್ಕಿನ ಮರಿಯ ಅಳುವ ಶಬ್ದ ಕೇಳುವುದಕ್ಕೆ ಆರಂಭವಾಯಿತು. ಒಳಗಿದ್ದ ಇವನಿಗೆ ಒಂದಷ್ಟು ತಳಮಳ ಶುರುವಾಯಿತು. ಆ ಬೆಕ್ಕನ್ನ ಓಡಿಸುವುದಕ್ಕೆ ಶತಗತಾಯ ಪ್ರಯತ್ನವನ್ನು ಕೂಡ ಪಡ್ತಾ ಇದ್ದ. ಆ ಪುಟ್ಟ ಮರಿ ಒಂದು ದಿನ ನಮ್ಮ ಮನೆಯೊಳಕ್ಕೆ ಪ್ರವೇಶವೂ ಮಾಡ್ತು. ತುಂಬಾ ಪುಟ್ಟ ಮರಿ ಬದುಕುವುದಕ್ಕೆ ಕಷ್ಟವಾದ ಪರಿಸ್ಥಿತಿ ಇದ್ದ ಕಾರಣ ಮನೆಯೊಳಗೆ ಅದಕ್ಕೂ ಒಂದು ಸ್ಥಾನವನ್ನು ಕಲ್ಪಿಸಲಾಯಿತು. ಅನ್ನ ನೀರನ್ನು ಕೊಟ್ಟು ಕೈಯಲ್ಲಿ ಹಿಡಿದು ಮುದ್ದು ಮಾಡ್ತಾ ಇದ್ದಾಗ ದೂರದಲ್ಲಿ ಕುಳಿತು ನೋಡುತ್ತಿದ್ದ ನಮ್ಮ ಮನೆಯ ಮೊದಲ ಯಜಮಾನ. ಆತನಿಗೆ ಮನೆಯೊಳಗೆ ಇರುವುದಕ್ಕೆ ಸಹ್ಯವಾಗುತ್ತಾ ಇರಲಿಲ್ಲ. ಎಲ್ಲಾ ಪ್ರೀತಿಯನ್ನು ಪಡೆಯುವುದೇ ದೊಡ್ಡ ಆಸೆ ಅವನದಾಗಿತ್ತು. ದಿನ ಕಳೆದಂತೆ ಊಟ ತಿಂಡಿ ಕಡಿಮೆ ಮಾಡತೊಡಗಿದ, ಮನೆ ಒಳಕ್ಕೆ ಇರುವುದಕ್ಕೆ ಇಷ್ಟಪಡದೆ ಹೊರ ನಡೆಯುವುದಕ್ಕೆ ಪ್ರಾರಂಭ ಮಾಡಿದ. ಚುರುಕುತನ ಕಳೆದುಕೊಂಡ ಈ ಪುಟ್ಟ ಬೆಕ್ಕಿನ ಮರಿ ಯಾವಾಗ ನಮ್ಮ ಮನೆಯನ್ನು ತೊರೆದು ಹೊರಟು ಹೋಯಿತು ಅವತ್ತು ಮತ್ತದೇ ಸಂತೋಷದಿಂದ ಮನೆಯೊಳಗೆ ಓಡಾಡುವುದಕ್ಕೆ ಆರಂಭ ಮಾಡಿದ. ಅಂದಿನಿಂದ ಆತನ ಬದುಕಿನಲ್ಲಿ ಮತ್ತೆ ಬದಲಾವಣೆಗಳು ಕಾಣುವುದಕ್ಕೆ ಆರಂಭವಾದವು. ಆತ ಮನೆಯ ರಾಜನಾದ ಎಲ್ಲಾ ಪ್ರೀತಿಯು ಅವನಿಗೆ ಸಿಕ್ತ ಹೋಯಿತು. ಅಸೂಯೆ ಮನುಷ್ಯರಲ್ಲಿ ಮಾತ್ರ ಅಲ್ಲ ಪ್ರಾಣಿಗಳಲ್ಲೂ ಬರುತ್ತೆ ಅಂತ ನನಗೆ ಅವತ್ತು ಅರ್ಥವಾಯಿತು.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ