ಸ್ಟೇಟಸ್ ಕತೆಗಳು (ಭಾಗ ೧೨೩೩) - ಮದ್ದು

ಮದ್ದು ಬೇಕಾಗಿದೆ ಆದರೆ ಆ ಮದ್ದಿಗಾಗಿ ನಾನು ಆಸ್ಪತ್ರೆ ಅಲೆಯೋದಿಲ್ಲ. ಅದಕ್ಕಾಗಿ ಖರ್ಚು ಮಾಡುವ ಸಮಯವೂ ನನ್ನಲ್ಲಿಲ್ಲ. ಆ ಮದ್ದಿಗೆ ದೊಡ್ಡ ದೊಡ್ಡ ಆಸ್ಪತ್ರೆ ಅಲೆದಾಡುವ ವ್ಯವದಾನವಿಲ್ಲ. ನನಗೆ ಮದ್ದು ಬೇಕಾಗಿದೆ. ಒಂದಷ್ಟು ಒಂಟಿತನಕ್ಕೆ, ನೋವಿನ ವ್ಯಥೆಗೆ,ಒಳಗೆ ಅದುಮಿಕೊಂಡಿರುವ ಸಿಟ್ಟಿಗೆ, ಹೇಳಲಾಗದೆ ಉಳಿದ ಮಾತುಗಳಿಗೆ, ಹೊಟ್ಟೆ ಉರಿಗೆ ಎಲ್ಲದ್ದಕ್ಕೂ ಮದ್ದು ಬೇಕಾಗಿದೆ. ಆ ಮದ್ದು ನಿಮ್ಮಲ್ಲಿ ಸಿಗಬಹುದೇ, ಒಂದಷ್ಟು ಮಾತು ಬೇಕಾಗಿದೆ, ನನ್ನೊಳಗಿನ ನೋವಿಗೆ, ಅಹಂಕಾರಕ್ಕೆ ಎಲ್ಲವೂ ಕರಗಿ ಹೋಗುವಂತಹ ಮಾತುಗಳು ಬೇಕಾಗಿದೆ. ನಿಮ್ಮೊಂದಿಗೆ ಒಂದಷ್ಟು ಮಾತುಕತೆಯಾಡಿ, ಒಂದಷ್ಟು ಸಮಯ ಕಳೆದರೆ ಸಾಕು. ಅಂತಹ ಮದ್ದು ಬೇಕಾಗಿದೆ ದಯವಿಟ್ಟು ಮದ್ದು ನೀಡುವಿರಾ? ಹೀಗೆ ಮದ್ದು ನೀಡುವವರು ಬೇಕಾಗಿದ್ದಾರೆ. ಸದ್ಯದಲ್ಲಿ ಹೀಗೆ ಮದ್ದು ನೀಡುವವರು ಹೆಚ್ಚಾಗಬೇಕು... ನೀವು ಮದ್ದು ನೀಡುವವರಾಗಿ, ನಾನೂ ಮದ್ದು ನೀಡುತ್ತೇನೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ