ಸ್ಟೇಟಸ್ ಕತೆಗಳು (ಭಾಗ ೧೨೪೧) - ಕಳೆದುಹೋದದ್ದು

ನಿನಗೆ ಇವತ್ತು ಕೊಟ್ಟ ಕೆಲಸವನ್ನ ಜವಾಬ್ದಾರಿಯಿಂದ ನಿರ್ವಹಿಸಬೇಕು. ಅಷ್ಟು ದೊಡ್ಡ ಕೆಲಸವೇನೂ ಅಲ್ಲ. ಆದರೆ ಇದು ನೀನು ನಿನ್ನೊಳಗೆ ಹುಡುಕಬೇಕಾದ ಕೆಲಸ. ನಿನ್ನೊಳಗೆ ತುಂಬಾ ಮರೆತ ವಿಚಾರಗಳನ್ನ ಹಿಡಿದುಕೊಂಡು ಬಿಟ್ಟಿದ್ದೀಯಾ. ಅವುಗಳನ್ನ ಹುಡುಕಿ ತೆಗೆಯಬೇಕು ಅಷ್ಟೇ, ಕೆಲವೊಂದು ಕಡೆ ನೀನು ಮಾತು ಕೊಟ್ಟಿರುವುದನ್ನ ಅಲ್ಲೇ ಮರೆತು ಉಳಿಸಿರಬಹುದು. ಅಥವಾ ನಿನ್ನ ಕನಸುಗಳ ಪಟ್ಟಿಗಳ ದೊಡ್ಡ ಸಾಲುಗಳನ್ನ ಹಾಗೆ ಮೂಲೆಯಲ್ಲಿ ಇಟ್ಟಿರಬಹುದು . ಯಾರಿಗೂ ಹೇಳಬೇಕಾದ ಧನ್ಯವಾದಗಳು, ಪ್ರೀತಿಯ ಮಾತುಗಳನ್ನ ಕೋಣೆಯೊಳಗೆ ಹಾಕಿ ಬೀಗ ಹಾಕಿರಬಹುದು. ಅದೆಲ್ಲವನ್ನ ಒಮ್ಮೆ ಹೊರಗೆ ತೆಗೆದು ಮತ್ತೊಮ್ಮೆ ಅವೆಲ್ಲ ಪಟ್ಟಿಗಳನ್ನ ಓದಿಕೊಂಡು ಬಾ ಆಗ ನಿನ್ನ ಬದುಕಿನ ಇನ್ನೊಂದು ಹೊಸ ದಾರಿ ಕಾಣಿಸಬಹುದು ಒಂದಷ್ಟು ಮುಚ್ಚಿಟ್ಟದ್ದು ಸಮಾಜಕ್ಕೆ ಪರಿಚಯವಾಗಬಹುದು. ನಿನಗೂ ಅಥವಾ ಇನ್ನೊಬ್ಬರಿಗೂ ಅದರಿಂದ ಉಪಯೋಗವಾಗಬಹುದು. ಮೊದಲು ಈ ಕೆಲಸವನ್ನು ಮಾಡು ಆನಂತರ ಮುಂದಿನ ಮಾತನಾಡುವ" ಅಪ್ಪ ಹೀಗೊಂದು ಜವಾಬ್ದಾರಿಯನ್ನ ನನಗೆ ದಾಟಿಸಿ ಕೋಣೆಯೊಳಗೆ ನಡೆದ್ಬಿಟ್ರು. ನಾನು ಕಳೆದು ಹೋದ ಯೋಚನೆಗಳನ್ನು ಯೋಚಿಸುತ್ತಾ ಯೋಚಿಸುತ್ತಾ ಕಳೆದು ಹೋಗಿಬಿಟ್ಟೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ