ಸ್ಟೇಟಸ್ ಕತೆಗಳು (ಭಾಗ ೧೨೫೧) - ವರ್ತನೆ

ಅಮ್ಮ ನನಗ್ಯಾಕೆ ಹೊಡೆಯುತ್ತಿದ್ದಾರೆ, ಅರ್ಥವೇ ಅಗುತ್ತಿಲ್ಲ. ಇತ್ತೀಚಿಗೆ ನಮ್ಮೂರಿನ ವಾರ್ಷಿಕೋತ್ಸವದಲ್ಲಿ ನಮ್ಮ ತಂಡದ ನೃತ್ಯ ಇತ್ತು. ಅದಕ್ಕೆ ತಿಂಗಳಿನಿಂದ ಮನೆಯಲ್ಲಿ ಅಭ್ಯಾಸವೂ ನಡೆದಿತ್ತು. ಅಮ್ಮನೇ ಆ ನೃತ್ಯವನ್ನು ಅಭ್ಯಾಸವೂ ಮಾಡಿಸಿದ್ದರು. ಆದರೆ ಆ ದಿನ ವಾರ್ಷಿಕೋತ್ಸವದಲ್ಲಿ ನೃತ್ಯ ಮಾಡುವುದ್ದಕ್ಕೆ ವೇದಿಕೆಯ ಮೇಲೆ ಹತ್ತಿದವನಿಗೆ ಒಮ್ಮೆಲೆ ಭಯವಾಯಿತು. ಎದುರಿನಿಂದ ಮುಖದ ಬೀಳುವ ಬೆಳಕು, ಜನ ಸಾಗರ ಗಮನಿಸಿದವನಿಗೆ ನೃತ್ಯದ ಹೆಜ್ಜೆಗಳೇ ಮರೆತು ಹೋಯಿತು. ವೇದಿಕೆಯ ಮೇಲೆ ಮೌನವಾಗಿ ನಿಂತುಬಿಟ್ಟೆ. ನೃತ್ಯ ಮುಗಿದ. ಕೂಡಲೇ ಅಮ್ಮ ವೇದಿಕೆಗೆ ಬಂದು ನನಗೆ ಹೊಡೆಯುವುದ್ದಕ್ಕೆ ಆರಂಭ ಮಾಡಿದರೂ "ನನ್ನ ಮರ್ಯಾದೆ ತೆಗೆಯೋದ್ದಕ್ಕೆ ಹುಟ್ಟಿದವ ನೀನು, ನಾನು ಎಲ್ಲರ ಬಳಿ ಎಷ್ಟು ಹೇಳಿಕೊಂಡಿದ್ದೇನೆ ಗೊತ್ತಾ, ನಿನ್ನಿಂದಾಗಿ ತಲೆ ಎತ್ತಿ ಚಲಿಸೋದಕ್ಕಾಗುವುದಿಲ್ಲ. ಕೊಟ್ಟ ಮಾತು ಉಳಿಸಿಕೊಳ್ಳಾಲಾಗದವ. ಹೇಡಿ, ನೀನ್ಯಾಕೆ ಇನ್ನೂ ಇದ್ದೀಯಾ ಅಸಹ್ಯ… ಅಪ್ಪನ ಮಾತುಗಳು ಮಗುವಿನ ಮನಸ್ಸಿನಲ್ಲಿ ಜೋಡಿಸಲಾಗದ ಬಿರುಕನ್ನ ಮೂಡಿಸುತ್ತಿತ್ತು. ಆಯೋಜಕರು ಅರ್ಥವಿಲ್ಲದ ಕಾರ್ಯಕ್ರಮವಾದ್ದಕ್ಕೆ ಬೇಸರಿಸಿಕೊಂಡರು.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ