ಸ್ಟೇಟಸ್ ಕತೆಗಳು (ಭಾಗ ೧೨೫೪) - ರೈಲು

ಸ್ಟೇಟಸ್ ಕತೆಗಳು (ಭಾಗ ೧೨೫೪) - ರೈಲು

ನೀನು ಎಚ್ಚರವಾಗಿದ್ದೀಯಾ ತಾನೇ... ಯಾಕೆಂದರೆ ನೀನು‌ ಹತ್ತಿರುವ ರೈಲು ಎಲ್ಲಿಗೆ ತಲುಪುತ್ತೆ ಅನ್ನೋದು ನಿನಗೆ ಗೊತ್ತಿದೆ ಅಲ್ಲವೇ. ಯಾಕೆಂದರೆ ವಿಳಾಸ ತಪ್ಪಿದ್ದರೆ ಆದಷ್ಟು ಬೇಗ ಇಳಿದು ಬಿಡು. ಇಲ್ಲವಾದರೆ ದೂರ ಹೋದಷ್ಟು ವಾಪಾಸು ಬರುವುದು ಕಷ್ಟವಾಗುತ್ತದೆ. ಒಮ್ಮೆ‌ಸರಿಯಾಗಿ ಪರಿಶೀಲಿಸಿ ಬಿಡು. ಸುತ್ತ‌ಮುತ್ತಲ ವಾತಾವರಣ ನಿನ್ನದೇ ಅನಿಸಿಬಿಡಬಹುದು. ಜೊತೆಗ ಸಾಗುವವರು ಅತ್ಯಂತ ಆತ್ಮೀಯವಾಗಿರಬಹುದು ಆದರೆ  ನೀನು ತಲುಪುವ ಜಾಗದ ಜಾಗದ ಅವಶ್ಯಕತೆ ಅವರಿಗಿಲ್ಲ. ಹಾಗಾಗಿ ಸರಿಯಾಗಿ ಪರಿಶೀಲಿಸಿ ಬಿಡು. ನೀನು ಹತ್ತಿದ ರೈಲು ಸರಿಯಿದೆಯಾ ಇಲ್ಲವೋ  ಎಂದು. ಯಾಕೆಂದರೆ ತಪ್ಪು ರೈಲಿಗೆ ಹತ್ತಿ ಅಪರಿಚಿತ ಊರಿಗೆ ತಲುಪಿ ಅನವಶ್ಯಕ ತೊಂದರೆಗೆ ಒಳಗಾಗುತ್ತೀಯಾ...ಎಚ್ಚರ ಇರಲಿ ಪರ ಊರಿಗೆ ಹೊರಟಾಗ ಪರಿಚಯದ ನಾರಾಯಣರು ಹೇಳಿದ ಮಾತನ್ನು ಇನ್ನೂ ನೆನಪಿಟ್ಟುಕೊಂಡಿದ್ದೇನೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ