ಸ್ಟೇಟಸ್ ಕತೆಗಳು (ಭಾಗ ೧೨೭೮) - ಬದಲಾಗು

ಸ್ಟೇಟಸ್ ಕತೆಗಳು (ಭಾಗ ೧೨೭೮) - ಬದಲಾಗು

ಒಮ್ಮೆ ತೊಳೆದುಕೊಂಡು ಬಿಡು. ಶುಭ್ರನಾಗು, ಮತ್ತೊಮ್ಮೆ ಖಂಡಿತಾ ಶುರು ಮಾಡಬಹುದು. ಹಿಂದೆ ಇದ್ದದ್ದು ಆಗಿರೋದು ಎಲ್ಲವೂ ಆಗಿಹೋಗಿದೆ, ಅದನ್ನ ಬಿಟ್ಟು ಮುಂದೆ ಹೋಗಿ‌ಬಿಡು. ಬದಲಾಗುವುದು ದೊಡ್ಡ ವಿಷಯ ಅಲ್ಲ. ಬದಲಾಗಿ ಬಿಡು. ಹಿಂದೆ ಆಗಿರುವುದ್ದಕ್ಕೆ ಮತ್ತೆ ಮತ್ತೆ ವ್ಯಥೆ ಪಡಬೇಡ. ಇನ್ನು ಮುಂದೆ ಹಾಗಿರುವುದಿಲ್ಲ ಅಂದುಕೊಂಡು ಹೊಸ‌ ವ್ಯಕ್ತಿ ಆಗು. ಬದಲಾದರೆ‌ ಜಗತ್ತು  ಒಪ್ಪಿಕೊಳ್ಳುತ್ತದೆ. ಆಗಿ ಬಿಡು ತುಂಬಾ ಯೋಚಿಸಬೇಡ. ನಿನ್ನೆ ನಾಳೆ‌ಗಳು ನಿನ್ನ ಕೈಯಲ್ಲಿಲ್ಲ. ಇವತ್ತು ಇದೆಯಲ್ಲ. ಹಾಗೇ ಶುಭ್ರನಾಗಿಬಿಡು. ಮೊದ ಮೊದಲು ನಿನ್ನನ್ನ ಒಪ್ಪಿಕೊಳ್ಳದೇ ಹೋದರು ಮತ್ತೆ ಖಂಡಿತಾ ಒಪ್ಪಿಕೊಳ್ಳುತ್ತಾರೆ. ಹಾಗಾಗಿ ಈ‌ ಕ್ಷಣದಿಂದ ನಿನ್ನೆಯ ನೀನು ಇಲ್ಲವಾಗಿ ಇಂದಿನ‌ ನೀನು ಹುಟ್ಟಿಕೊಳ್ಳಬೇಕು. ಹೀಗಂದು ಕೈ ಕುಲುಕಿ ಹೋದವರು ದಿನೇಶ್ ಅಣ್ಣ. ಅವರ ಬದಲಾವಣೆಯನ್ನ ಜಗತ್ತು ಒಪ್ಪಿಕೊಂಡಿತ್ತು. ನಾನೂ ಹಾಗೆಯೇ ಇರಬೇಕು ಅನ್ನುವ ಆಸೆ ಅವರಿಗೆ. ಅವರ ಆಸೆಯನ್ನ ತಿರಸ್ಕರಿಸುವುದೇತಕೆ? ಒಪ್ಪಿಕೊಂಡು ಸಾಗುತ್ತೇನೆ.‌ ನಿಮಗೆ ಬೇಕಿದ್ದರೆ ಪಡೆದುಕೊಳ್ಳಿ

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ