ಸ್ಟೇಟಸ್ ಕತೆಗಳು (ಭಾಗ ೧೨೮೭) - ಹುಡುಕಬೇಕು

ಸ್ಟೇಟಸ್ ಕತೆಗಳು (ಭಾಗ ೧೨೮೭) - ಹುಡುಕಬೇಕು

ನೀನು ಇನ್ನೂ ಹುಡುಕುವುದಕ್ಕೆ ಆರಂಭವೇ ಮಾಡಿಲ್ಲವೇಕೆ? ಹೋ ನಿನಗಿನ್ನೂ ತಿಳಿದಿಲ್ಲ ನೀನು ಕಳೆದುಕೊಂಡಿರುವುದು ಏನನ್ನ ಅಂತ. ಮೊದಲದನ್ನ ಅರ್ಥಮಾಡಿಕೋ. ನಿನ್ನ ಬದುಕಿನ ದಾರಿ ಹುಡುಕುವುದರ ಜಂಜಾಟದಲ್ಲಿ ನಿನ್ನ ನೀನು‌ ಕಳೆದುಕೊಂಡಾಗಿದೆ. ಮತ್ತದನ್ನ ಹುಡುಕಿಕೊಳ್ಳದೇ ಹೋದರೆ ಅದ್ಭುತ ವ್ಯಕ್ತಿಯೊಬ್ಬ ಇಲ್ಲವಾಗುತ್ತಾನೆ. ಆ ಕಳೆದು ಹೋದವನು ಎಲ್ಲರನ್ನು ಪ್ರೀತಿಸುತ್ತಿದ್ದ, ಅವನೊಳಗೆ ದ್ವೇಷಕ್ಕೆ ಜಾಗವೇ ಇರಲಿಲ್ಲ, ಹೊಸ ಹೊಸ ಕೆಲಸಕ್ಕೆ ಹೆಜ್ಜೆ ಇಡುತ್ತಿದ್ದ,  ಸೋಲುಗಳಿಗೆ ಹೆದರುತ್ತಿರಲ್ಲ, ಎಲ್ಲದಕ್ಕೂ ಸಮಯ ಹೊಂದಾಣಿಕೆ ಮಾಡಿಕೊಂಡಿದ್ದ, ಅಂದುಕೊಂಡಿದ್ದನ್ನ ಸಾಧಿಸುತ್ತಿದ್ದ, ಸಾದ್ಯವಾಗದ್ದನ್ನ ಮಾತನಾಡುತ್ತಿರಲಿಲ್ಲ, ಅಭ್ಯಾಸಗಳು ಅನುಕರಣೀಯವಾಗಿದ್ದವು, ಎಲ್ಲರಿಗೂ ಒಳಿತನ್ನ ಬಯಸುತ್ತಿದ್ದ, ಸದಾ ನಗುತ್ತಿದ್ದ. ಇವನನ್ನು ಕಳೆದುಕೊಂಡಾಗಿದೆ ಮತ್ತೆ ಹುಡುಕಿ ನಿನ್ನ ಜೊತೆಗಿಟ್ಟುಕೋ ಅವನು ಅದ್ಭುತವನ್ನ ಸಾಧಿಸ್ತಾನೆ. ನಾನು ನಿನ್ನ ಜೊತೆ ಅಂದು ಅವನನ್ನು ನೋಡಿದ್ದೆ. ಈಗ ಅವನು ಕಾಣುತ್ತಿಲ್ಲ. ಜೊತೆಯಾದರೆ ನಿನಗೆ ಒಳ್ಳೆಯದು. ಪ್ರೈಮರಿ ಶಾಲೆಯ ರತ್ನಾವತಿ ಟೀಚರ್ ಇವತ್ತು ದಾರಿಯಲ್ಲಿ ಸಿಕ್ಕಿ ಹೇಳಿದ ಮಾತು ತುಂಬಾ ಯೋಚನೆಗೆ ದಾರಿಯಾಗಿದೆ

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ