ಸ್ಟೇಟಸ್ ಕತೆಗಳು (ಭಾಗ ೧೨೯೯) - ಚಳಿ

ಸ್ಟೇಟಸ್ ಕತೆಗಳು (ಭಾಗ ೧೨೯೯) - ಚಳಿ

ಒಂದಷ್ಟು ಜನ ಚಳಿ ಕಾಯಿಸಿಕೊಳ್ಳುತ್ತಿದ್ದಾರೆ ಅವರಿಗೆ ಬದುಕಬೇಕಾಗಿದೆ ಹಾಗಾಗಿ ಚಳಿ ಕಾಯಿಸಿಕೊಳ್ಳುತ್ತಿದ್ದಾರೆ. ಬೆಂಕಿಯನ್ನು ಅವರಾಗಿಯೇ ಹಚ್ಚಿಕೊಂಡಿಲ್ಲ. ಸುತ್ತ ಸೇರಿದವರೆಲ್ಲರನ್ನು ಸುಟ್ಟು ತಾವು ಚಳಿ ಕಾಯಿಸಿ ಕೊಳ್ಳುತ್ತಿದ್ದಾರೆ. ಆ ಸುತ್ತ ಸುಡುತ್ತಾ ಇರುವರಲ್ಲಿ ನೀನು ಇರಬಹುದೇನೋ? ಯೋಚಿಸು ಅವರ ಮೈ ಬೆಚ್ಚಗಾಗಬೇಕು ಅವರು ಇನ್ನೊಂದು ಹೆಚ್ಚು ದಿನ ಬದುಕಬೇಕು ಅವರ ನಾಳೆಯ ಬದುಕಿಗೆ ನೀನು ಇವತ್ತು ಸುಡ್ತಾ ಇದ್ದೀಯ. ದಿನ ಕಳೆದಂತೆ ಸುಟ್ಟು ಸುಟ್ಟು ನೀನು ಬೂದಿ ಆಗ್ತೀಯಾ, ಅವರು ಆ ಬೆಂಕಿಯಲ್ಲಿ ಮೈ ಬಿಸಿ ಮಾಡಿಕೊಂಡು ಇನ್ನೊಂದಷ್ಟು ಎತ್ತರವನ್ನು ಏರ್ತಾರೆ. ಸುಟ್ಟ ನೀನು ಜಗತ್ತಿಗೆ ಕಾಣುವುದಿಲ್ಲ. ಹಾಗಾಗಿ ಒಮ್ಮೆ ಯೋಚಿಸಿಕೋ ಯಾವ ಕಾರಣಕ್ಕೆ ಸುಡ್ತಾ ಇದ್ದೀಯಾ ಅಂತ.... ಬೆನ್ನ ಹಿಂದೆ ನಿಂತು ಮುಖ ಪರಿಚಯವಿಲ್ಲದವರು ನುಡಿದ ಮಾತಿನಿಂದ‌ ಮೈ ಯಾಕೋ ಕಂಪಿಸಿತು.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ