ಸ್ಟೇಟಸ್ ಕತೆಗಳು (ಭಾಗ ೧೩೦೦) - ಹುಡುಕಾಟ

ಹುಡುಕಾಟ ಮುಂದುವರೆದಿದೆ. ಅಪರಾಧಿ ಎಲ್ಲಿ ಅಂತ ಇಬ್ಬರೂ ಹುಡುಕುವರೇ? ಇಬ್ಬರಲ್ಲೂ ದೊಡ್ಡ ವ್ಯತ್ಯಾಸವೇನಿಲ್ಲ. ಮೊದಲನಯವ ನಾನು ಹುಡುಕುತ್ತಾ ಹೋಗುವ ದಾರಿಯಲ್ಲಿ ಯಾರು ಸಿಗಬೇಕು ಅನ್ನುವ ಪಟ್ಟಿಯನ್ನು ನಿರ್ಧಾರ ಮಾಡಿಕೊಂಡಿದ್ದಾನೆ, ಯಾರು ಸಿಗಬಾರದು ಅನ್ನೋದನ್ನು ಕೂಡ ನಿರ್ಧರಿಸಿದ್ದಾನೆ. ಆ ವಿಷಯವನ್ನು ಇಟ್ಟುಕೊಂಡು ಹುಡುಕಾಟ ಆರಂಭಿಸಿದ್ದಾನೆ ಇವನು ಕೊನೆಯವರೆಗೂ ಕೊನೆಯನ್ನ ತಲುಪುವುದಿಲ್ಲ. ಏನು ಗೊತ್ತಿಲ್ಲದೆ ನಮಗೆ ಬೇಕಾದ ವ್ಯಕ್ತಿಯನ್ನು ಹುಡುಕಬೇಕಾದಾಗ ಮೂಲದಿಂದಲೇ ಪ್ರತಿಯೊಂದು ವಿಷಯವನ್ನ ಕೂಲಂಕುಶವಾಗಿ ಪರಿಶೀಲಿಸಿ ಹುಡುಕಬೇಕು. ಅದನ್ನ ಬಿಟ್ಟು ನನ್ನ ಹುಡುಕಾಟದಲ್ಲಿ ಸಿಗಬೇಕಾಗಿರೋದು ಇದೆ ಅನ್ನೋದನ್ನ ನಿರ್ಧಾರ ಮಾಡಿಕೊಂಡು ಹುಡುಕಿದಾಗ ತಪ್ಪಿತಸ್ಥ ಕೈಗೆ ಸಿಗುವುದಕ್ಕೆ ಸಾಧ್ಯ ಇಲ್ಲ. ಇನ್ನೊಬ್ಬರದ್ದು ಕೂಡ ಇದೇ ತರಹದ ಹುಡುಕಾಟ. ನಮಗೊಬ್ಬನ ಮೇಲೆ ಸಂಶಯವಿದೆ ಆತ ತಪ್ಪು ಮಾಡಿದ್ದಾನೆ ಎನ್ನುವ ಕಾರಣಕ್ಕೆ ಅದರ ಸುತ್ತಮುತ್ತವೇ ಹುಡುಕಾಟ ಆರಂಭಿಸಿದ್ದಾರೆ. ಇಬ್ಬರಿಗೂ ನ್ಯಾಯದ ಕಡೆಗೆ ಸಾಗುವ ಯೋಚನೆ ಇಲ್ಲ. ಉಸಿರುಗಟ್ಟಿ ಸತ್ತವರು ಮೇಲೆ ನಿಂತು ಬೇಡಿಕೊಳ್ಳುತ್ತಿದ್ದಾರೇನೋ ಆದರೆ ಕೇಳುವವರಿಲ್ಲ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ