ಸ್ಟೇಟಸ್ ಕತೆಗಳು (ಭಾಗ ೧೩೦೫) - ಹೂವು

ಸ್ಟೇಟಸ್ ಕತೆಗಳು (ಭಾಗ ೧೩೦೫) - ಹೂವು

ಹೂವಿನೊಂದಿಗೆ ಮಾತುಕತೆ ಶುರುವಾಗಿತ್ತು. ‌ಅಲ್ಲೋ ಹೂರಾಯ ನೀನು‌ನಿನ್ನ ಗಿಡದಲ್ಲಿ ಮಾತ್ರ ಅರಳಿ ಪರಿಮಳ ಬೀರುತ್ತೀಯಾ. ಸ್ವಲ್ಪ ಹೊರಗಡೆ ಬೇರೆಯವರಿಗೂ ಬೇರೆ ಸ್ಥಳದಲ್ಲಿ ಅರಳಿ ಬಿಡು. ಇಲ್ಲಿ ಮಾತ್ರ ಅರಳಿ ಆಗುವುದೇನು? ನೋಡು ನಿನಗೆ ಅದರ ಮೌಲ್ಯ ಗೊತ್ತಿಲ್ಲ ಮಾನವ, ನಾವು ಎಲ್ಲಿ ಬೇರು ಬಿಟ್ಟಿದ್ದೇವೋ ಅಲ್ಲೇ ಅರಳಿ ಬಿಡಬೇಕು. ಅಲ್ಲಿಂದಲೇ ಪರಿಮಳ ಜಗತ್ತಿಗೆ ಪರಿಚಯವಾಗಬೇಕು, ಅದರ ಸಂಭ್ರಮ ನಿನ್ನೊಳಗೆ ಅರ್ಥವಾಗುತ್ತೆ. ಅದನ್ನ ಅರ್ಥ ಮಾಡಿಕೋ. ಮಾತುಕತೆ ಮುಗಿಯಿತು. ಅವನು ಅರ್ಥ ಮಾಡಿಕೊಳ್ಳುವುದೊಂದೇ ಬಾಕಿ

.-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ