ಸ್ಟೇಟಸ್ ಕತೆಗಳು (ಭಾಗ ೧೩೧೦) - ಭಗವಂತನಾಗುವತ್ತ…

ಸ್ಟೇಟಸ್ ಕತೆಗಳು (ಭಾಗ ೧೩೧೦) - ಭಗವಂತನಾಗುವತ್ತ…

ಹಾಗಿರುವುದಕ್ಕೆ ಅಷ್ಟು ಸುಲಭ ಸಾಧ್ಯವಿಲ್ಲ. ಭಗವಂತನ ಮೂರ್ತಿ ದೇವಸ್ಥಾನದ ಗರ್ಭಗುಡಿಯೊಳಗಿದ್ದು ಕೈ ಮುಗಿದು ಬರುವ ಭಕ್ತರಿಗೆ ಒಳಿತನ್ನೇ ಮಾಡ್ತಾ ಹೋಗುತ್ತೆ .ಹೆಚ್ಚು ಹೆಚ್ಚು ಜನರು ಅದರಿಂದ ಒಳಿತನ್ನು ಪಡೆದುಕೊಂಡರೂ ಕೂಡ ಭಗವಂತನ ಮೂರ್ತಿ ಯಾವತ್ತೂ ಅಹಂಕಾರ ಪಡುವುದಿಲ್ಲ. ತಾನು ನಿಂತಲ್ಲಿ ತನ್ನಯತೆಯಿಂದ ಭಕ್ತರ ಮಾತುಗಳನ್ನಾಲಿಸಿಕೊಂಡು ಹಾಗೆ ಉಳಿದುಬಿಡುತ್ತದೆ. ಹೀಗೆ ಕಾರ್ಯಕ್ರಮ ಒಂದನ್ನ ರೂಪಿಸಿ ಎಲ್ಲದರ ಜವಾಬ್ದಾರಿಯನ್ನ ನಿಭಾಯಿಸಿ, ಸಂಪೂರ್ಣ ಧನ ಸಹಾಯವನ್ನ ಮಾಡಿ ಮನೆಯೊಂದು ನೆಲದಿಂದ ಮೇಲೆದ್ದು ನಿಲ್ಲುವಂತೆ ಮಾಡಿದ ವ್ಯಕ್ತಿ ಕೂಡ ಹಾಗೆಯೇ ಉಳಿದುಬಿಟ್ಟಿದ್ದರು. ಎಲ್ಲೂ ಕೂಡ ಅವರನ್ನು ನೋಡಿದಾಗ ಎಲ್ಲದಕ್ಕೂ ಕಾರಣಕರ್ತ ಅವರು ಅನ್ನೋದು ಕಂಡು ಬರಲೇ ಇಲ್ಲ. ಅವರೊಳಗಿದ್ದ ತನ್ಮಯತೆ ಪ್ರಾಮಾಣಿಕತೆ, ನಿಸ್ವಾರ್ಥ ಭಾವದಿಂದ ಅಲ್ಲಿ ಸೇರಿದ ಹಲವರು ಸಂಭ್ರಮವನ್ನು ಪಟ್ಟಿದ್ದರು. ವ್ಯಕ್ತಿಯೊಬ್ಬ ಯಾರಿಗೂ ಗೊತ್ತಿಲ್ಲದೆ ದೇವರಾಗಿ ಬಿಟ್ಟಿದ್ದರು. ನಮಗೂ ಅವಕಾಶ ಖಂಡಿತ ಭಗವಂತ ಕೊಡ್ತಾನೆ. ದೇವರಾಗುವ ಅವಕಾಶ ಸಿಕ್ಕಿದಾಗ ತನ್ಮಯತೆಯಿಂದ ಹಾಗೆ ಆಗುವುದಕ್ಕೆ ಪ್ರಯತ್ನ ಪಟ್ಟರೆ ಸಾಕು ಖಂಡಿತ ಒಳಿತೇ ಆಗ್ತದೆ ಹೀಗೆ ಭಗವಂತನ ಅಶರೀರವಾಣಿ ಕಿವಿಗೆ ತಲುಪಿ ಮನಸೊಳಗೆ ಗಟ್ಟಿಯಾಯಿತು. ಒಳಿತನ್ನ ಮಾಡಬೇಕು ನಾನು ದೇವರಂತಾಗಬೇಕು ಅಂತ ಹೆಜ್ಜೆ ಇಟ್ಟಿದ್ದೇನೆ ಆಗುವ ಆಲೋಚನೆ ದೊಡ್ಡದಲ್ಲವೇ ನೋಡೋಣ ಏನಾಗ್ತದೆ ಅಂತ...

.-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ