ಸ್ಟೇಟಸ್ ಕತೆಗಳು (ಭಾಗ ೧೩೧೨) - ಸಮಯ

ಸ್ಟೇಟಸ್ ಕತೆಗಳು (ಭಾಗ ೧೩೧೨) - ಸಮಯ

ಸಮಯ ಒಂದಷ್ಟು ಆಯುಧಗಳನ್ನು ಹಿಡಿದುಕೊಂಡು ಕಾಯುತ್ತಾ ನಿಂತಿತ್ತು. ಅದಕ್ಕೆ ಹಲವು ಜನರನ್ನ ನಾಶಪಡಿಸುವ ಹುಮ್ಮಸ್ಸು ಹೆಚ್ಚಾಗ್ತಾ ಇತ್ತು. ಇಷ್ಟು ದಿನದವರೆಗೂ ಹೀಗಿರದ ಸಮಯದ ಮುಖದಲ್ಲಿ ರೌದ್ರತೆ ಎದ್ದು ಕಾಣ್ತಾಯಿತ್ತು. ಕಣ್ಣು ಕೆಂಪಗಾಗಿ ಕಣ್ಣೀರು ಇಳಿಸಿಕೊಂಡು ಒಂದಷ್ಟು ಜನರ ಸಾವನ್ನ ಎದುರು ನೋಡ್ತಾ ಇತ್ತು. ಎದುರು ಸಿಕ್ಕಿದ ಕಾರಣ ಪ್ರಶ್ನೆ ಕೇಳಿ ಬಿಟ್ಟೆ. ಹಲೋ ಸಮಯರಾಯ ನೀನು ಒಂದು ದಿನವೂ ಹೇಗಿದ್ದವನಲ್ಲ, ಎಲ್ಲರಿಗೂ ಒಳಿತನ್ನೇ ಮಾಡಬೇಕು ಅಂತ ಕಾದುಕೊಂಡಿದ್ದವ. ಆದರೆ ಇಂದು ಇಷ್ಟು ಕ್ರೋಧದಿಂದ ಯಾರ ಸಾವನ ಎದುರು ನೋಡ್ತಾ ಇದ್ದೀಯಾ? ಅದಕ್ಕೆ ಸಮಯ" ನೋಡು ನನಗೆ ಗೌರವವಿದೆ, ಆದರೆ ಎಷ್ಟು ಜನ ನನ್ನ ಗೌರವಿಸುತ್ತಾರೆ ಎಷ್ಟು ಜನ ನನಗೆ ಮೌಲ್ಯ ಕೊಡುತ್ತಾರೆ. ಎಲ್ಲರೂ ಅವರವರ ಸ್ವಾರ್ಥ   ಬಯಸುವವರು. ನನಗೆ ಒಂದಿನಿತು ಗೌರವ ನೀಡದೆ ಪ್ರತಿದಿನ ನನ್ನನ್ನ ಕೊಲ್ಲುತ್ತಾ ಇರುವವರನ್ನು ಎಷ್ಟು ದಿನ ಅಂತ ಕ್ಷಮಿಸೋದು. ನನ್ನಿಂದ ಕಾಯೋಕೆ ಆಗೋದಿಲ್ಲ. ನಾನು ಅವರ ಸಾಧನೆ ಎದುರು ನೋಡುತ್ತಾನೆ ಮಾಯವಾಗಾಲು  ಬಿಡ್ತೇನೇನೋ  ನನ್ನ ಯಾರೆಲ್ಲ ನನಗೆ ಯಾರೆಲ್ಲ ಮೋಸ ಮಾಡಿದ್ದಾರೋ ಯಾರು ನನ್ನನ್ನು ಸರಿಯಾಗಿ ಬಳಸಿಕೊಳ್ಳದೆ ವ್ಯರ್ಥ ಮಾಡಿದ್ದಾರೆ ಯಾರು ನನ್ನನ್ನ ಕೊಂದಿದ್ದಾರೋ ಅವರೆಲ್ಲರನ್ನ ನಾಶ ಮಾಡುವುದಕ್ಕೆ ನಾನು ತಯಾರಾಗಿದ್ದೇನೆ ಆಯುಧಕ ಮೂಲಕ ಮಾತಿನ ಮೂಲಕ ಹೀಗೆ ಯಾವುದೆಲ್ಲ ವಿಧಗಳಲ್ಲಿ ಸಾಧ್ಯ ಇದೆಯೋ ಎಲ್ಲ ರೂಪದಲ್ಲಿ ಅವರ ಸಾವನ್ನ ಖಂಡಿತ ನೋಡ್ತೇನೆ. ಅವತ್ತೇ ನನಗೆ ಸಂಪೂರ್ಣ ನೆಮ್ಮ ದಿ ಹಾಗಾಗಿ ಕಾಯುತ್ತಿದ್ದೇನೆ ಇಂದಿನ ಬಲಿ ಎಷ್ಟು ಅಂತ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ