ಸ್ಟೇಟಸ್ ಕತೆಗಳು (ಭಾಗ ೧೩೧೩) - ಸಾವಿನ ವ್ಯಾಪಾರಿ

ಸ್ಟೇಟಸ್ ಕತೆಗಳು (ಭಾಗ ೧೩೧೩) - ಸಾವಿನ ವ್ಯಾಪಾರಿ

ಸಾವಿನ ತಲ್ಲಣದ ಉಸಿರಾಟದ  ಪಿಸುಮಾತು ಎದೆಯೊಳಗೆ ಪ್ರತಿದ್ಧನಿಸುತ್ತಿದೆ. ಅರ್ಥವಾಗಿರ್ಲಿಲ್ಲ, ಆದರೆ ಇತ್ತೀಚಿಗೆ ಸಾವು ಊರಿನ ನಡುವೆ ಓಡಾಡುವುದ್ದಕ್ಕೆ ಪ್ರಾರಂಭ ಮಾಡಿದೆ. ಸಾವಿಗೆ ಯಾವ ಆಸೆಯೂ ಇಲ್ಲ. ಅದರ ಮನೆಯನ್ನು ತುಂಬಿಸಿಕೊಳ್ಳುವ ಜರೂರತ್ತು ಇಲ್ಲ. ಆದರೆ ಜನರೇ ಸಾವನ್ನು ಆರಿಸಿಕೊಳ್ಳುತ್ತಿದ್ದಾರೆ. ಆರೋಗ್ಯದ ತಪ್ಪಿನಿಂದ ಸಾವನ್ನು ಬರ ಮಾಡಿಕೊಳ್ಳುತ್ತಿದ್ದಾರೆ. ಗಾಡಿಯ ವೇಗವನ್ನ ಹೆಚ್ಚಿಸುವುದರಿಂದ ಯಾರದೋ ಮೇಲಿನ ದ್ವೇಷದಿಂದ, ಹುಚ್ಚಿನಿಂದ ಹೀಗೆ ವಿಧವಿಧವಾಗಿ ಸಾವನ್ನ ಆರಿಸಿಕೊಳ್ಳುತ್ತಿದ್ದಾರೆ,ಸಾವಿನ ಮನೆಯ ವ್ಯಾಪಾರಿಗೆ ಯಾವುದರ ಅವಶ್ಯಕತೆ ಇಲ್ಲ. ಅವನ ದೈನಂದಿನ ಬದುಕು ನಿರಾಳವಾಗಿ ಸಾಗಿದೆ .ಆದರೆ ನಾವು ಸಾವಿನ ವ್ಯಾಪಾರಿಯನ್ನು ಲೆಕ್ಕಕಿಂತ ಹೆಚ್ಚು ಮೆಚ್ಚಿಕೊಂಡು ಅವನ ಮಾರುಕಟ್ಟೆಯನ್ನು ವಿಸ್ತರಿಸುವ  ಕಡೆಗೆ ಹೆಜ್ಜೆ ಇಟ್ಟಿದ್ದೇವೆ. ಎಚ್ಚರ ಸಾವಿನ ವ್ಯಾಪಾರಿಗೆ ಈ ಕೆಲಸ ಇಷ್ಟವಾದರೆ ನಾವು ಬದುಕುವುದಕ್ಕೆ ಸ್ಥಳ ಹುಡುಕಬೇಕಾದಿತು. ಸಾವು ದೂರದಲ್ಲಿ ಇದ್ದುಬಿಟ್ಟು ಆಗೊಮ್ಮೆ ಈಗೊಮ್ಮೆ ಬಂದು ಹೋಗಿಬಿಡಲಿ. ಹೀಗೆ ಜೋರು ಮಾತಿನಿಂದ ಎಲ್ಲರೊಳಗೆ ಯೋಚನೆಯ ಪ್ರವಾಹವನ್ನು ಹರಿಯಬಿಟ್ಟಿದ್ದಾರೆ ಶ್ರೀಗಳು. ಅವರ ಪ್ರವಚನ ಕೇಳಿದ ಪ್ರತಿ ಮನೆಯಲ್ಲಿ ಬೌದ್ಧಿಕ ಬದಲಾವಣೆ ಆರಂಭವಾಗಿದೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ