ಸ್ಟೇಟಸ್ ಕತೆಗಳು (ಭಾಗ ೧೩೧೫) - ಬದಲಾಗಬೇಕಿದೆ

ಸ್ಟೇಟಸ್ ಕತೆಗಳು (ಭಾಗ ೧೩೧೫) - ಬದಲಾಗಬೇಕಿದೆ

ದೇಶದ ಮೂಲೆಯಲ್ಲಿ ಭಯೋತ್ಪಾದನಾ ಘಟನೆಯೊಂದು ನಡೆದಿತ್ತು. ಎಲ್ಲರಿಗೂ ಅದೊಂದು ಭಯವನ್ನು ಸೃಷ್ಟಿಸಿತು. ಇದಕ್ಕೊಂದು ಪ್ರತಿರೋಧ ನೀಡಬೇಕು ಅನ್ನುವ ನಿಟ್ಟಿನಲ್ಲಿ ವಿದ್ಯಾರ್ಥಿಗಳೆಲ್ಲ ಸೇರಿ ಪ್ರತಿರೋಧವನ್ನು ತೋರಿಸಿದರು. ದೇಶದ ಇನ್ನೊಂದು ಮೂಲೆಯಲ್ಲಿ ಪ್ರತಿಭಟನಾ ಮೆರವಣಿಗೆಯನ್ನು ಮಾಡಿದರು. ವಿದ್ಯಾರ್ಥಿಗಳು ತಮ್ಮ ಆಲೋಚನೆಗಳನ್ನ ಬದಲಾದ ಬೇಕಾದ ರೀತಿ ನೀತಿಗಳನ್ನ ಆಯೋಜಿಸಬೇಕಾದ ಕಾರ್ಯಕ್ರಮಗಳನ್ನು ಪಟ್ಟಿ ಮಾಡಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವುದಕ್ಕೂ ತೆರಳಿದರು. ವಿದ್ಯಾರ್ಥಿಗಳಿಗೆ ತಾವು ದೇಶದ ಭಾಗವಾಗಬೇಕು ಅನ್ನುವ ಆಸೆ ಹಾಗೆ ಮನವಿಯನ್ನ ಸಲ್ಲಿಸುವಾಗ ಜಿಲ್ಲಾಧಿಕಾರಿಗಳಿಂದ ವಿದ್ಯಾರ್ಥಿಗಳಿಗೆ ಧನಾತ್ಮಕ ಮಾತುಗಳು ಸಿಗ್ಲೇ ಇಲ್ಲ." ಇಂತಹ ಹೋರಾಟಗಳು ಪ್ರತಿಭಟನೆಗಳಿಗೆ ದೊಡ್ಡವರಿದ್ದಾರೆ, ನಿಮ್ಮದು ಓದುವ ವಯಸ್ಸು ತರಗತಿಯ ಒಳಗೆ ಕುಳಿತು ಪಠ್ಯ ಪುಸ್ತಕವನ್ನು ಓದಿದರೆ ಸಾಕು, ರಸ್ತೆಗೆಳಿದು ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವುದಕ್ಕೆ ಜನ ಇದ್ದಾರೆ. ಈ  ಪ್ರತಿಭಟನೆಗಳಿಂದ ನಿಮ್ಮ ಮನಸ್ಸು ಬದಲಾಗಬಹುದು, ತಪ್ಪು ದಾರಿ ಹಿಡಿಯಬಹುದು, ಹಾಗಾಗಿ ಓದುವುದನ್ನು ಮುಂದುವರೆಸಿ, ತಂದೆ ತಾಯಿಗಳ ಕನಸುಗಳನ್ನು ನನಸು ಮಾಡಿ. ಹೊರಡಿ" ದೇಶದ ಜೊತೆಗೆ ನಿಲ್ಲಬೇಕು ಅಂದುಕೊಂಡಿದ್ದ ಮಕ್ಕಳಿಗೆ ಮನಸ್ಸಿಗೆ ತುಂಬಾ ನೋವಾಯಿತು. ಮತದಾನ ಮಾಡುವ ವಯಸ್ಸಾಗಿದೆ ದೇಶ ಕಟ್ಟುವ ಯೋಚನೆಯನ್ನು ಮಾಡುವುದು ಯಾವಾಗ? ಬದಲಾಗಬೇಕಾಗಿರೋದು ಯಾರು ಅಭ್ಯಾಸದ ಸಮಯದಲ್ಲೂ ದೇಶದ ಬಗ್ಗೆ ಚಿಂತಿಸುವ ನಾವೋ ಅಥವಾ ವಿದ್ಯಾಭ್ಯಾಸವನ್ನು ಪೂರ್ತಿಗೊಳಿಸಿ ದೇಶದ ಜವಬ್ದಾರಿಯ ಹುದ್ದೆಯಲ್ಲಿದ್ದೂ ಪ್ರೋತ್ಸಾಹಿಸದ ಅವರೋ ತಿಳಿಲಿಲ್ಲ ... ಮಕ್ಕಳು ಮೌನವಾದರೂ…

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ