ಸ್ಟೇಟಸ್ ಕತೆಗಳು (ಭಾಗ ೧೩೨೩) - ಇಕ್ಕೆಲಗಳು

ಸ್ಟೇಟಸ್ ಕತೆಗಳು (ಭಾಗ ೧೩೨೩) - ಇಕ್ಕೆಲಗಳು

ರಸ್ತೆ ನೇರವಾಗಿದೆ, ವಕ್ರವಾಗಿದೆ, ಹೊಂಡ ಗುಂಡಿಗಳಿಂದ ತುಂಬಿದೆ, ಏರು ತಗ್ಗುಗಳಿವೆ, ಇದೆಲ್ಲವೂ ಸಾಗುವ ದಾರಿಯಲ್ಲಿದ್ದದ್ದೇ ಆದರೆ ಹಾಗೆ ಸಾಗ್ತಾ ಸಾಗುತ್ತಾ ದಾರಿಯ ಎರಡು ಬದಿಗಳನ್ನು ನೋಡದೆ ಹೋದರೆ ಆ ಕ್ಷಣವನ್ನ ಅನುಭವಿಸದೆ ಹೋದರೆ ಅಲ್ಲಿ ಕಾಣುವ ಬೆಟ್ಟ ಗುಡ್ಡಗಳು ನದಿ ತೋಟ ಗದ್ದೆ ಮನೆ ಮನುಷ್ಯರು ಗಿಡ ಪ್ರಾಣಿ ಪಕ್ಷಿ ಇದ್ಯಾವುದನ್ನು ನೋಡದೆ ಹಾಗೆ ಸಾಗಿಬಿಟ್ಟರೆ ನಿನ್ನ ಪಯಣದಲ್ಲಿ ಅದ್ಭುತವಾದದನ್ನ ಕಳೆದುಕೊಳ್ಳುತ್ತೀಯಾ, ಪ್ರತೀ ಕ್ಷಣವು ರಸ್ತೆಯನ್ನ ಹೊಂಡ ಗುಂಡಿಗಳನ್ನ ದೂರುತ್ತಾ ಹೋದರೆ ನಿನ್ನ ಎರಡು ಬದಿಯಲ್ಲಿ ಕಾಣುವ ಸ್ವರ್ಗವನ್ನು ಕಳೆದುಕೊಳ್ಳುತ್ತೀಯ. ಇದನ್ನು  ಎಲ್ಲರೂ ಮಾಡುತ್ತಾರೆ, ಅದರಲ್ಲಿ ನೀನು ಹೊಸಬನಲ್ಲ, ಆದರೆ ಆ ದೂರುವ ದಾರಿಯಲ್ಲಿ ನಿನ್ನ ಎಡ ಬಲಗಳಲ್ಲಿ ಹಾದುಹೋದ ಅದ್ಭುತ ಸೌಂದರ್ಯವನ್ನು ನೀನು ಅನುಭವಿಸದೆ ಹೋದದ್ದು ತಪ್ಪು. ಅದಕ್ಕೆ ಮತ್ತೆ ಕೇಳಿಕೊಳ್ಳುತ್ತೇನೆ ನೀನು ಬಂದ ದೂರ ತುಂಬಾ ಏನಲ್ಲ .ಆದರೆ ಇನ್ನೂ ಹೋಗೋ ದಾರಿ ದೂರ ಇದೆ. ಎರಡು ಬದಿಗಳನ್ನ ನೋಡ್ತಾ ಆಸ್ವಾದಿಸುತ್ತಾ ಕ್ಷಣವನ್ನ ದಾಟಿಬಿಟ್ರೆ ಕೆಲವೊಂದು ಹೊಂಡ ಗುಂಡಿಗಳು ಏರು ತಗ್ಗುಗಳು ಸಮಸ್ಯೆ ಅನ್ನಿಸುವುದಿಲ್ಲ. ಹೀಗಂದ ನನ್ನಜ್ಜನ ಮುಖದಲ್ಲಿ ಅದೊಂದು ಕಾಂತಿ ಮಿಂಚುತ್ತಾಯಿತ್ತು ಅವರು ಈ ಸೂತ್ರವನ್ನ ಅಳವಡಿಸಿದ್ದ ಕಾರಣ ಅವರ ಜೀವನ ಅದ್ಭುತವಾಗಿ ಸಾಗಿ ಬಂದಿತ್ತು. ನಾನು ಅದನ್ನೇ ಮಾಡಬೇಕು ಅನ್ನೋದು ಅವರ ಆಸೆಯು ಆಗಿತ್ತು. ಅಜ್ಜನ ಮಾತನ್ನ ಮೊಮ್ಮಕ್ಕಳು ನಾವು ಪಾಲಿಸಲೇಬೇಕು ತಾನೆ?

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ