ಸ್ಟೇಟಸ್ ಕತೆಗಳು (ಭಾಗ ೧೩೨೪) - ಆಟಿಕೆ

ಸ್ಟೇಟಸ್ ಕತೆಗಳು (ಭಾಗ ೧೩೨೪) - ಆಟಿಕೆ

ಆಟಿಕೆ ಸಾಮಾನುಗಳೆಲ್ಲ ಒಂದು ಡಬ್ಬದೊಳಗೆ ಕುಳಿತು ಉಸಿರುಗಟ್ಟಿಸಿಕೊಂಡು ಸಾಯುತ್ತಿವೆ . ಕೆಲವು ಧೂಳು ಹಿಡಿದುಕೊಂಡು ತಮ್ಮ ಮೈಯನ್ನ ಒರೆಸುವವರಿಲ್ಲದೆ ನರಳುತ್ತಿವೆ . ಅಂಗಡಿಯಿಂದ ಖರೀದಿಸಿ ಒಂದು ದಿನ ಬಳಕೆಯಾಗಿ ಕೈ ಕಾಲು ಮುರಿದುಕೊಂಡು ಮೂಲೆಗೊರಗಿ ಬಿಟ್ಟಿವೆ. ಆಗಾಗ ಮಕ್ಕಳು ಯಾರಾದರೂ ಬಂದು ಹತ್ತಿರ ನಿಂತು  ಮುದ್ದಿಸುವರೋ ಅಂತ ಕಾಯ್ತಾ ಇದೆ. ಕಾಲಗಳ ಎಷ್ಟೇ ಉರುಳಿದರೂ ಅವುಗಳ ಸ್ಥಿತಿಗಳು ಬದಲಾಗ್ತಾ ಇಲ್ಲ. ಮನೆಯಲ್ಲಿ ಮಕ್ಕಳಿದ್ದಾರೆ, ಎಲ್ಲರಿಗೂ ಆಡುವ ಮನಸ್ಸಿದೆ. ಆದರೆ ಕೈಯಲ್ಲಿ ಹಿಡಿದಿರುವ ಮೊಬೈಲ್ ಅವರನ್ನ ಗಟ್ಟಿಯಾಗಿ ಹಿಡಿದಿಟ್ಟುಕೊಂಡಿದೆ. ಅವರ ಕಣ್ಣುಗಳು ಮನಸ್ಸುಗಳು ಅದನ್ನೇ ಆಸೆ ಪಡುತ್ತಿವೆ. ಒಂದು ದಿನವೂ ಈ ಆಟಿಕೆಗಳ ಕಡೆ ಯಾರೂ ಗಮನ ಹರಿಸ್ತಾ ಇಲ್ಲ. ಅಂಗಡಿಯಲ್ಲೂ ಅವುಗಳನ್ನು ಕೇಳುವವರಿಲ್ಲ. ಅದನ್ನ ಸಣ್ಣ ವಯಸ್ಸಿನ ಪುಟ್ಟ ಕೈಗಳೇ ಅದನ್ನ ನೇವರಿಸ್ತಾ ಇಲ್ಲ. ಒಟ್ಟಿನಲ್ಲಿ ಆಟಿಕೆಗಳೆಲ್ಲ ಜೀವನದ ಬಗ್ಗೆ ರೋಸಿ ಹೋಗಿ ಬದುಕು ನಿರರ್ಥಕ ಅನಿಸುತ್ತಿದೆ. ಆಟಿಕೆಗಳು ಕೇಳಿಕೊಳ್ಳುತ್ತಿವೆ ನಮ್ಮನ್ನ ಹುಟ್ಟಿಸಬೇಡಿ ಹುಟ್ಟಿಸಿ ಹೀಗೆ ಮೂಲೆಗೊರಗಿ ಯಾತನೆ ಪಡುವಂತೆ ಮಾಡಬೇಡಿ… ನಿಮ್ಮಲ್ಲಿ ಬೇಡಿಕೆ ಇಷ್ಟೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ