ಸ್ಟೇಟಸ್ ಕತೆಗಳು (ಭಾಗ ೧೩೨೭) - ಕನಸಿಲ್ಲದವರು

ಸ್ಟೇಟಸ್ ಕತೆಗಳು (ಭಾಗ ೧೩೨೭) - ಕನಸಿಲ್ಲದವರು

ಮಗಳಿಗೆ ಕನಸಿತ್ತು, ಮದುವೆ ಕಾರ್ಯಕ್ರಮದ ಸಂಭ್ರಮದ ಮೆರುಗಿನ‌ ಬಗ್ಗೆ ಆಸೆ ದೊಡ್ಡದಿತ್ತು. ಅಪ್ಪ ಅಣ್ಣನ ಕಿಸೆಗಳು ಮೌನತಾಳಿದ್ದವು. ಮಗಳಿಗೆ ಅವಳ ಆಸೆಗಳೇ ದೊಡ್ಡದಾಗಿತ್ತು.‌ ನಾಲ್ಕು ಜನರ ಬಾಯಲ್ಲಿ ಗೌಜಿ ಗಮ್ಮತಿನ ಮಾತು‌ ನಡೆಯಬೇಕಿತ್ತು. ಬಣ್ಧದ ಬೆಳಕು ಮಿಂಚಬೇಕು. ಶಬ್ದದ ಅಬ್ಬರ ಪಕ್ಕದೂರಿಗೆ ಕೇಳಬೇಕು. ಹೊಟ್ಟೆ ಬಿರಿಯುವಂತಹ ಊಟವಿರಬೇಕು, ನಶೆಯಿಂದ ತೇಲಾಡುವವರಿಗೆ ವ್ಯವಸ್ಥೆ ಆಗಬೇಕು. ಹೀಗೆ ಎಲ್ಲವನ್ನ ಹಠದಿಂದ ಸಾಧಿಸಿದಳು. ಎಲ್ಲವೂ ಅದ್ದೂರಿಯಾಗಿತ್ತು. ಆಕೆ ಗಂಡನ ಮನೆಗೆ ಬೆಳಕಾಗಿ ಹೋದಳು. ಈಗ ಮನೆಯಲ್ಲಿ ದುಡಿಮೆ ಹೆಚ್ಚಾಗಿದೆ. ನಿದ್ದೆ ಕಡಿಮೆಯಾಗಿದೆ. ಸಾಲದ ಹೊರೆ ಇನ್ನೂ ಇಳಿಯುತ್ತಿಲ್ಲ. ಈಗ ಯಾರ ಬಾಯಲ್ಲೂ ಮಾತಿಲ್ಲ. ಎಲ್ಲರೂ ಅವರ ಬದುಕಿನಲ್ಲಿ ಮುಳುಗಿ ಹೋಗಿದ್ದಾರೆ. ಕನಸು ಕಂಡವಳು ಹೊಸ ಕನಸುಗಳೊಂದಿಗೆ ಬದುಕುತ್ತಿದ್ದಾಳೆ, ಕನಸಿಗೆ ನೀರೆರೆದವರು ಕನಸುಗಳಿಲ್ಲದೇ ಬದುಕುತ್ತಿದ್ದಾರೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ